ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊತ್ತು ಗುರಿ ಇಲ್ಲದ ಸರ್ಕಾರದ ನಡೆ: ಸಿಪಿಎಂ ಖಂಡನೆ

Last Updated 12 ಜುಲೈ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಗೊತ್ತು ಗುರಿ ಇಲ್ಲದ ಕ್ರಮಗಳಿಗೆ ಬೆಂಗಳೂರಿನ ಜನರು ಬಲಿಯಾಗುತ್ತಿದ್ದಾರೆ’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್‌ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

‘ಕೋವಿಡ್ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳು ಆರಂಭದಿಂದಲೂ ಸ್ಥಿರವಾಗಿಲ್ಲ. ಸರ್ಕಾರ ದಿನಕ್ಕೊಂದು, ವಾರಕ್ಕೊಂದು ಕ್ರಮ ಕೈಗೊಳ್ಳುತ್ತಿದೆ. ಕಾರ್ಪೊರೇಟ್ ಮತ್ತು ಲಿಕ್ಕರ್ ಲಾಬಿಗೆ ಮಣಿದು ಲಾಕ್‌ಡೌನ್ ಸಡಿಲಗೊಳಿಸಿದ್ದ ಸರ್ಕಾರ, ಈಗ ನಿಯಂತ್ರಣ ಕಳೆದುಕೊಂಡ ಬಳಿಕ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿದೆ’ ಎಂದು ಅಭಿಪ್ರಾಯಪಟ್ಟಿವೆ.

‘‌ನಗರದ ಶಾಸಕರು ಮತ್ತು ಸಚಿವರ ನಡುವೆ ಸಮನ್ವಯವೇ ಇಲ್ಲದೆ ಸರ್ಕಾರದಲ್ಲೇ ಎರಡು ಅಧಿಕಾರ ಕೇಂದ್ರಗಳು ಸೃಷ್ಟಿಯಾಗಿದೆ. ಸರ್ಕಾರದಮೇಲಿನ ಆರ್‌ಎಸ್ಎಸ್ ಹಿಡಿತ, ಕೋವಿಡ್ ನಿರ್ವಹಣೆಯ ಹೊಣೆಯನ್ನು ದಿನಕ್ಕೊಬ್ಬ ಸಚಿವರಿಗೆ ಕೊಡುತ್ತಿರುವುದರಿಂದ ಪರಿಸ್ಥಿತಿ ಕೈಮೀರುವಂತೆ ಮಾಡಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT