ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಚಿನ್ನದ ನಾಣ್ಯ ಮಾರಾಟ: ಇಬ್ಬರ ಬಂಧನ

Last Updated 13 ಜನವರಿ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳು ವಿ.ವಿ ಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಷಣ್ಮುಖಂ ಮತ್ತು ಶ್ರೀನಿವಾಸ ರೆಡ್ಡಿ ಬಂಧಿತ ಆರೋಪಿಗಳು. ವಿಜಯನಗರದ ನಿವಾಸಿ ಕುರವಟ್ಟಿ ಎಂಬುವರು ನೀಡಿದ ಸುಳಿವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ವಿಕ್ಕ್ಟೋರಿಯಾ ಆಸ್ಪ‍ತ್ರೆಯಲ್ಲಿದ್ದತಮ್ಮ ಸಂಬಂಧಿಯನ್ನು ಕಾಣಲುಕುರವಟ್ಟಿಕಳೆದ ವಾರ ಬಂದಿದ್ದರು. ಆದರೆ, ಅವರು ಬೇರೆ ಆಸ್ಪತ್ರೆಗೆ ತೆರಳಿದ್ದ ಮಾಹಿತಿ ಪಡೆದು, ಕ್ಯಾಂಟೀನ್ ಬಳಿ ಬಂದಿದ್ದರು. ಈ ವೇಳೆ ಆರೋಪಿಗಳು ತಮ್ಮನ್ನು ಪರಿಚಯಿಸಿಕೊಂಡಿದ್ದರು.

‘ತಮಗೆ ಕೃಷಿ ಜಮೀನೊಂದರಲ್ಲಿ ನಿಧಿ ಸಿಕ್ಕಿದೆ. ಒಂದು ಕೆ.ಜಿಯಷ್ಟು ಚಿನ್ನದ ನಾಣ್ಯಗಳು ಇದ್ದು, ₹5 ಲಕ್ಷಗಳಿಗೆ ಮಾರಾಟ ಮಾಡುವುದಾಗಿ ನಾಣ್ಯಗಳನ್ನು ತೋರಿಸಿದ್ದರು.ಕೊಳ್ಳುವ ಆಸಕ್ತಿ ಇಲ್ಲ ಎಂದರೂ ನಾಣ್ಯಗಳನ್ನು ಖರೀದಿಸುವಂತೆಕುರವಟ್ಟಿ ಅವರಿಗೆ ಒತ್ತಾಯಿಸಿದ್ದರು‘.

‘ಅದರಂತೆ ಆರೋಪಿಗಳನ್ನು ಕುರವಟ್ಟಿಸೋಮವಾರ ಭೇಟಿಯಾಗಿದ್ದರು. ಈ ವೇಳೆ ಮಣ್ಣಿನೊಂದಿಗೆ ಇದ್ದ ನಕಲಿ ಚಿನ್ನದ ನಾಣ್ಯಗಳನ್ನು ತೋರಿಸಿದ್ದರು. ಇದನ್ನು ನಂಬಿಕುರವಟ್ಟಿ ಮುಂಗಡವಾಗಿ ₹8 ಸಾವಿರ ಪಾವತಿಸಿದ್ದರು. ಉಳಿದ ಹಣ ಬ್ಯಾಂಕಿನಿಂದ ತರುತ್ತೇನೆ. ವಾಪಸ್‌ ಬರುವವರೆಗೆ ಅಲ್ಲೇ ಇರುವಂತೆ ತಿಳಿಸಿದ್ದರು’.

‘ನಾಣ್ಯಗಳ ಬಗ್ಗೆ ಅನುಮಾನದಿಂದ ವಿ.ವಿ ಪುರ ಪೊಲೀಸರ ಬಳಿ ತೆರಳಿ, ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರು.ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಬಂಧಿಸಿದರು. ನಾಣ್ಯಗಳು ನಕಲಿಯಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT