ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯೂಟ್ ಟ್ಯಾಕ್ಸಿ ಸಂಚಾರ ಇಂದಿನಿಂದ

Published 23 ಏಪ್ರಿಲ್ 2023, 18:53 IST
Last Updated 23 ಏಪ್ರಿಲ್ 2023, 18:53 IST
ಅಕ್ಷರ ಗಾತ್ರ

ಬೆಂಗಳೂರು: ಆಟೊರಿಕ್ಷಾದಂತೆ ಪ್ರಯಾಣಿಕ ಸೇವೆ ಒದಗಿಸಲು ನಾಲ್ಕು ಚಕ್ರದ ‘ಕ್ಯೂಟ್’ ( ಕ್ವಾಡ್ರಿಸೈಕಲ್‌)’ ವಾಹನಗಳು ನಗರದಲ್ಲಿ ಸೋಮವಾರದಿಂದ ಅಧಿಕೃತವಾಗಿ ರಸ್ತೆಗೆ ಇಳಿಯಲಿದ್ದು, ಸಾರಿಗೆ ಇಲಾಖೆ ದರ ನಿಗದಿ ಮಾಡಿದೆ.

ಹೊಸ ಮಾದರಿಯ ಈ ಪುಟ್ಟ ನಾಲ್ಕು ಚಕ್ರದ ವಾಹನಗಳನ್ನು ಮೀಟರ್ ಅಳವಡಿಕೆಯೊಂದಿಗೆ ರಸ್ತೆಗೆ ಇಳಿಯಲಿವೆ. ಬಜಾಜ್ ಕಂಪನಿ ಮುಖ್ಯಸ್ಥರು ವಾಹನಗಳಿಗೆ ಸೋಮವಾರ ಚಾಲನೆ ನೀಡಲಿದ್ದಾರೆ.

ಈ ವಾಹನಗಳ ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸಾರಿಗೆ ಇಲಾಖೆ ಅನುಮತಿ ನೀಡಿ, ದರ ನಿಗದಿಪಡಿಸಿದೆ. 4 ಕಿ.ಮೀ ವರೆಗೆ ₹60 ಕನಿಷ್ಠ ದರ. ನಂತರ ಪ್ರತಿ ಕಿಲೋ ಮೀಟರ್‌ಗೆ ₹16 ಇರಲಿದೆ ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಕಾರು ಮಾದರಿಯ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವು 2019ರಲ್ಲಿ ಮಾರುಕಟ್ಟೆಗೆ ಬಂದಿತ್ತು. ಸಾರಿಗೆ ಇಲಾಖೆ ದರ ನಿಗದಿ ಪಡಿಸಿರಲಿಲ್ಲ. ಆದರೂ ಉಬರ್ ಸಂಸ್ಥೆಯೊಂದಿಗೆ ಅವಲಂಬಿತರಾಗಿ ಟ್ಯಾಕ್ಸಿ ಸೇವೆ ಒದಗಿಸಲಾಗುತ್ತಿತ್ತು. ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿ ದರ ನಿಗದಿ ಮಾಡಲು ಕೋರಿದ್ದೆವು. ಸರ್ಕಾರ ದರ ನಿಗದಿ ಮಾಡಿದೆ ಎಂದು ಓಲಾ ಮತ್ತು ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ತಿಳಿಸಿದ್ದಾರೆ.

ಆಟೊರಿಕ್ಷಾ ಮಾದರಿಯಲ್ಲಿ ರಸ್ತೆಯಲ್ಲಿ ಈ ವಾಹನಗಳನ್ನು ಪ್ರಯಾಣಿಸಬಹುದು. ವಾಹನ ಖರೀದಿಸುವ ಚಾಲಕರು ಓಲಾ, ಉಬರ್ ರೀತಿಯ ಆ್ಯಪ್ ಜತೆಗೂಡಿಯೂ ಸೇವೆ ಒದಗಿಸಲು ಅವಕಾಶ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT