ಬೆಂಗಳೂರು: ಕೋವಿಡ್ ಕಾಲದಲ್ಲಿ ವಲಸೆ ಕಾರ್ಮಿಕನೊಬ್ಬ ಸೈಕಲ್ನಲ್ಲಿ ಸತತ ಏಳು ದಿನ 1,700 ಕಿಲೋಮೀಟರ್ ಸಂಚರಿಸಿದ ಕಥೆಯನ್ನು ಇಟ್ಟುಕೊಂಡು ನಿರ್ಮಿಸಿರುವ ‘ಸೈಕಲ್ ಮಹೇಶ್’ ಚಿತ್ರವು ಹಲವು ಕಥೆಗಳನ್ನು ಹೇಳುತ್ತದೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಸುಹೇಲ್ ಬ್ಯಾನರ್ಜಿ ತಿಳಿಸಿದರು.

ಗೌರಿ ಲಂಕೇಶ್ ಅವರ ಜನ್ಮ ದಿನ ‘ಗೌರಿ ದಿನ’ ಕಾರ್ಯಕ್ರಮದ ಪ್ರಯುಕ್ತ ಗೌರಿ ಸ್ಮಾರಕ ಟ್ರಸ್ಟ್ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸೈಕಲ್ ಮಹೇಶ್’ ಸಾಕ್ಷ್ಯಚಿತ್ರ ಪ್ರದರ್ಶನದ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಾದ್ಯಂತ ಲಾಕ್ಡೌನ್ ಮಾಡಿದಾಗ ವಲಸೆ ಕಾರ್ಮಿಕರು ಕೆಲಸ ಇಲ್ಲದೇ, ಊರಿಗೂ ಮರಳಲಾರದೇ ಸಂಕಷ್ಟಕ್ಕೆ ಸಿಲುಕಿದ್ದರು. ಹಲವರು ನಡೆದುಕೊಂಡೇ ಹೊರಟಿದ್ದರು. ಮಹೇಶ್ ಎಂಬ ಯುವ ಕಾರ್ಮಿಕನೊಬ್ಬ ಸೈಕಲ್ನಲ್ಲಿ ತನ್ನೂರಿಗೆ ಹೊರಟು ಏಳು ದಿನಗಳಲ್ಲಿ ತಲುಪಿದ. ಅದು ಮಾಧ್ಯಮಗಳಲ್ಲಿ ಆಗ ದೊಡ್ಡ ಸುದ್ದಿಯಾಗಿತ್ತು. ಈ ನಿಜ ಘಟನೆಯನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ನಾವು ಇಲ್ಲಿ ಆಡಳಿತದ ವೈಫಲ್ಯವನ್ನು ತೋರಿಸದೇ ಇದ್ದರೂ ಕಥೆಯೇ ಅದನ್ನು ಹೇಳುತ್ತದೆ’ ಎಂದು ಹೇಳಿದರು.

ಭಾರತೀಯ ಸಿನಿಮಾ ಮಾಧ್ಯಮವು ಕಾರ್ಮಿಕ ವರ್ಗವನ್ನು ಅಲಕ್ಷಿಸಿದೆ. ಸಣ್ಣ ಚಿತ್ರಗಳ ಮೂಲಕ ಕಾರ್ಮಿಕರ ಸಂಕಷ್ಟ, ಹೋರಾಟವನ್ನು ತೋರಿಸುವ ಪ್ರಯತ್ನ ಇದು ಎಂದರು.

ಅಂತರರಾಷ್ಟ್ರೀಯ ಡಾಕ್ಯುಮೆಂಟರಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಈ ಚಿತ್ರವು 60 ನಿಮಿಷದ್ದಾಗಿದೆ. ಒಡಿಶಾ, ಮರಾಠಿ ಮತ್ತು ಹಿಂದಿ ಮಿಶ್ರಿತ ಭಾಷೆಯಲ್ಲಿರುವ ಚಿತ್ರವು ಮಹೇಶನ ಪ್ರಯಾಣದ ವೇಳೆ ದಾರಿ ತಪ್ಪುವುದು, ಸೈಕಲ್ ಹಾಳಾಗುವುದು, ಗುಡ್ಡ ಏರುವುದು, ರಾತ್ರಿ ಪ್ರಯಾಣ, ಸ್ನೇಹಿತರೊಂದಿಗೆ ಚರ್ಚೆಗಳನ್ನು ಕಟ್ಟಿಕೊಡುತ್ತದೆ.

ಸಂವಾದ ಕಾರ್ಯಕ್ರಮದಲ್ಲಿ ಚಳವಳಿಗಾರ ವಿ.ಎಸ್. ಶ್ರೀಧರ್, ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ತೀಸ್ತಾ ಸೆಟಲ್ವಾಡ್, ಉಪಾಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಪ್ರದೀಪ್, ಸಂಭಾಷಣೆಗಾರ್ತಿ ಗುರ್ಲನ್ ಜಡ್ಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.