ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲಮಂಗಲ | ಅಡುಗೆ ಅನಿಲ ಸ್ಪೋಟ: ತಂದೆ ಮಗಳಿಗೆ ಗಾಯ

Published : 21 ಡಿಸೆಂಬರ್ 2023, 14:51 IST
Last Updated : 21 ಡಿಸೆಂಬರ್ 2023, 14:51 IST
ಫಾಲೋ ಮಾಡಿ
Comments

ನೆಲಮಂಗಲ: ನಗರದ ಶೇಷು ಬಡಾವಣೆಯಲ್ಲಿ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡು ತಂದೆ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂಜಯ್‌(40), ಪುತ್ರಿ ಲೇಖನಶ್ರೀ (5) ಗಾಯಗೊಂಡವರು.

ಟಿ. ದಾಸರಹಳ್ಳಿಯವರಾದ ಸಂಜಯ್‌ ಚಿಕ್ಕಬಾಣಾವರದ ಬೆಸ್ಕಾಂನಲ್ಲಿ ಲೈನ್‌ಮ್ಯಾನ್‌ ಆಗಿದ್ದಾರೆ. 8 ವರ್ಷಗಳಿಂದ ಶೇಷು ಬಡಾವಣೆಯಲ್ಲಿ ಬಾಡಿಗೆಮನೆಯಲ್ಲಿ ವಾಸವಿದ್ದಾರೆ.

ಗುರುವಾರ ಮಧ್ಯಾಹ್ನ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ. ಬೆಂಕಿಯಲ್ಲಿ ಸಿಲುಕಿದ್ದ ಸಂಜಯ್‌ ಮತ್ತು ಪುತ್ರಿ ಲೇಖನಶ್ರೀ ಅವರನ್ನು ಸ್ಥಳೀಯರು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿಗೆ ಆಹುತಿಯಾಗಿರುವ ಮನೆಯಲ್ಲಿನ ವಸ್ತುಗಳು
ಬೆಂಕಿಗೆ ಆಹುತಿಯಾಗಿರುವ ಮನೆಯಲ್ಲಿನ ವಸ್ತುಗಳು

ಅಗ್ನಿಶಾಮಕ ಠಾಣಾಧಿಕಾರಿ ಹೊನ್ನಸಿದ್ದಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿ ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಬೆಂಕಿ ನಂದಿಸುವ ವೇಳೆ ಇನ್ನೊಂದು ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿತು. ಅದೃಷ್ಟವಶಾತ್‌ ಸಿಬ್ಬಂದಿಗೆ ಯಾವುದೇ ಹಾನಿ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT