ಚಿರತೆ ಹಾವಳಿ ಭೀತಿಯಲ್ಲಿ ಗ್ರಾಮಸ್ಥರು

7

ಚಿರತೆ ಹಾವಳಿ ಭೀತಿಯಲ್ಲಿ ಗ್ರಾಮಸ್ಥರು

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ನರಸೀಪುರ ಗ್ರಾಮ ಪಂಚಾಯಿತಿ ಹಾಲೇನಹಳ್ಳಿಯ ಕೆರೆಯಂಗಳ ಹಾಗೂ ಏರಿ ಮುಳ್ಳು ಪೊದೆಗಳಿಂದ ಆವರಿಸಿದ ಕಾರಣ ಜನ ಕಾಡು ಪ್ರಾಣಿಗಳ ಭಯ ಎದುರಿಸುತ್ತಿದ್ದಾರೆ.

ಚಿರತೆ, ಕಾಡುಹಂದಿ ಹಾಗೂ ವಿಷಜಂತುಗಳು ಇಲ್ಲಿ ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಕೆರೆಗೆ ಹೊಂದಿಕೊಂಡಂತೆ ಏಳೆಂಟು ಮನೆಗಳಿವೆ. ಇವರೆಲ್ಲ ಸಂಜೆಗೆ ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾರೆ. ಒಂಟಿಯಾಗಿ ಹಾಗೂ ಕೈಯಲ್ಲಿ ಯಾವುದೇ ಆಯುಧವಿಲ್ಲದೇ ಹೊರಗೆ ಬರುವುದಿಲ್ಲ. ಯಾವಾಗ ಚಿರತೆ ದಾಳಿ ಮಾಡುತ್ತದೆಯೋ ಅನ್ನುವ ಆತಂಕ ಅವರದು. ಮೂರು ತಿಂಗಳ ಹಿಂದೆ ಕೆರೆಗೆ ಹೊಂದಿಕೊಂಡಿರುವ ಮಂಜುನಾಥ್ ಅವರ ಮನೆಯ ಬಳಿ ಸಂಜೆ ವೇಳೆಯೇ ಚಿರತೆ, ಕರುವನ್ನು ಎಳೆದುಕೊಂಡು ಹೋಗಿ ಅದೇ ಪೊದೆಯಲ್ಲಿ ತಿಂದು ಹಾಕಿತ್ತು.

‘ಹೈನುಗಾರಿಕೆಯನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದೇನೆ. ಐದು ಸೀಮೆ ಹಸುಗಳಿವೆ. ಈಗಾಗಲೇ ರುಚಿ ನೋಡಿರುವ ಚಿರತೆ ಅವುಗಳ ಮೇಲೆ ಎಲ್ಲಿದಾಳಿ ಮಾಡುತ್ತದೋ ಎಂಬ ಆತಂಕದಲ್ಲೇ ದಿನ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಮಂಜುನಾಥ್.

‘ಬೇಲಿಯಿಂದ ವಿಷಕಾರಕ ಹಾವುಗಳು ಮನೆಯ ಬಳಿ ಹರಿದು ಬರುತ್ತವೆ. ಕಾಡು ಹಂದಿಗಳು ಬೆಳಿಗ್ಗೆಯೇ ಪೊದೆಯಲ್ಲಿ ಅವಿತಿರುತ್ತವೆ. ಚಿರತೆಗಳು ಕಾಣಿಸಿಕೊಳ್ಳುತ್ತವೆ. ದಿನವೂ ಭಯದಲ್ಲಿ ಜೀವಿಸಬೇಕಾಗಿದೆ.

ಈ ಸಂಬಂಧ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದ್ದೇನೆ. ಆದರೆ ಮೂರು ತಿಂಗಳು ಕಳೆಯುತ್ತಾ ಬಂದರೂ ಬೇಲಿ ತೆಗೆಯುವ ಕೆಲಸ ಮಾಡಿಲ್ಲ’ ಎಂದು ನೋವು ತೋಡಿಕೊಳ್ಳುತ್ತಾರೆ ಗೃಹಿಣಿ ಸುಮಲತಾ.

‘ಅರ್ಜಿ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ, ಕಚೇರಿಯಲ್ಲಿ ವಿಚಾರಿಸಿ ಚರ್ಚಿಸಿ ಮುಂದೆ ಬೇಲಿ ತೆಗೆಸುವ ಕೆಲಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !