ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಹಂಚಿಕೆ, ರೋಗಿಗಳ ನೋಂದಣಿ ಮಾಹಿತಿ ನೀಡುವ ಡ್ಯಾಷ್ ಬೋರ್ಡ್

ಹಾಸಿಗೆ ಹಂಚಿಕೆ, ರೋಗಿಗಳ ನೋಂದಣಿ ಮಾಹಿತಿ
Last Updated 21 ಮೇ 2021, 4:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ, ವಲಯವಾರು ರೋಗಿಗಳ ನೋಂದಣಿ, ಆಸ್ಪತ್ರೆಯಿಂದ ಬಿಡುಗಡೆ ಕುರಿತು ತಾಜಾ ಮಾಹಿತಿ ನೀಡುವ (ರಿಯಲ್‌ ಟೈಮ್) ಡ್ಯಾಷ್ ಬೋರ್ಡ್ ಆರಂಭಿಸಲಾಗಿದೆ.

ಈ ವ್ಯವಸ್ಥೆಯಿಂದ ಹಾಸಿಗೆ ಹಂಚಿಕೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಪಾರದರ್ಶಕತೆ ಕಾಣಬಹುದು. ಹಾಸಿಗೆ ಹಂಚಿಕೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ತಾಂತ್ರಿಕ ತಂಡದ ಸಹಯೋಗದೊಂದಿಗೆ ಕೈಗೊಂಡ ಸುಧಾರಣಾ ಕ್ರಮದ ಭಾಗವಾಗಿ ಡ್ಯಾಷ್ ಬೋರ್ಡ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಈಗ ವೆಬ್‌ಸೈಟ್‌ನಲ್ಲಿ ಪ್ರತಿ ಆಸ್ಪತ್ರೆಯಲ್ಲಿರುವ ಹಾಸಿಗೆಗಳ ಸಂಖ್ಯೆ, ವಿವಿಧ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಲಭ್ಯತೆ ಪ್ರಮಾಣ, ಆಸ್ಪತ್ರೆಗೆ ಪ್ರವೇಶ ಪಡೆದಿರುವ ರೋಗಿಗಳ ವಿವರವನ್ನು ನೋಡಬಹುದು. ಡ್ಯಾಷ್ ಬೋರ್ಡ್ ನಲ್ಲಿ ಏಳು ದಿನಗಳ ಅವಧಿಗೆ ಹಾಸಿಗೆ ಹಂಚಿಕೆಯಲ್ಲಿ ಆಗುವ ಬದಲಾವಣೆ ಕುರಿತು ಮಾಹಿತಿ ಪಡೆಯಬಹುದು ಎಂದಿದ್ದಾರೆ.

ಹೊಸ ಡ್ಯಾಷ್ ಬೋರ್ಡ್ ಅಭಿವೃದ್ಧಿಪಡಿಸಲು ಅಧಿಕಾರಿಗಳು ಮತ್ತು ತಾಂತ್ರಿಕ ತಂಡದ ಆರ್‌.ಕೆ.ಮಿಶ್ರಾ ಮತ್ತು ಶರದ್‌ ಶರ್ಮ ನೆರವಾಗಿದ್ದಾರೆ ಎಂದರು.

ಹಾಸಿಗೆ ಲಭ್ಯತೆ ನಂತರ ನೇರವಾಗಿ ರೋಗಿಗಳಿಗೆ ಎಸ್‌ಎಂಎಸ್‌ ರವಾನೆ, ಎರಡು ಹಂತದ ದೃಢೀಕೃತ ಲಾಗಿನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಡಿಜಿಟಲ್‌ ಸರದಿ ಪದ್ಧತಿಯನ್ನು ವಾರದಲ್ಲಿ ಜಾರಿಗೆ ತರಲಾಗುವುದು ಎಂದರು.

ಸಾರ್ವಜನಿಕರು https://apps.bbmpgov.in/covid19/index.html ಮೂಲಕ ಡ್ಯಾಷ್ ಬೋರ್ಡ್ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT