ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ, ನೀಟ್ ಪರೀಕ್ಷೆಗೆ ಆನ್‌ಲೈನ್ ತರಬೇತಿ

Last Updated 10 ಜೂನ್ 2020, 19:00 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಅನುಕೂಲ ಆಗುವಂತೆ ವಿಶೇಷ ಆನ್‌ಲೈನ್ ತರಬೇತಿಯನ್ನು ದಯಾನಂದ ಸಾಗರ ವಿಶ್ವವಿದ್ಯಾಲಯ(ಡಿಎಸ್‌ಯು) ಆರಂಭಿಸಿದೆ.

ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜು, ದಯನಂದ ಸಾಗರ ತಾಂತ್ರಿಕ ಮತ್ತು ನಿರ್ವಹಣಾ ಕಾಲೇಜಿನ ಸಹಯೋಗದಲ್ಲಿಪ್ರತಿ ವರ್ಷ ಉಚಿತ ತರಬೇತಿ ನೀಡಲಾಗುತ್ತಿದೆ. ಕೋವಿಡ್–19 ಇರುವ ಕಾರಣ ಈ ಬಾರಿ ಆನ್‌ಲೈನ್ ತರಬೇತಿ ನೀಡಲು ಮುಂದಾಗಿದೆ.

‘ಜೂ. 12ರಂದು ಕೋರ್ಸ್‌ ಆರಂಭವಾಗಲಿದೆ. ಜುಲೈ 27ರಂದು ಕೋರ್ಸ್ ಮುಕ್ತಾಯವಾಗಲಿದೆ.ಜುಲೈ 15 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ವಿರಾಮ ನೀಡಲಾಗುವುದು. ವೇಳಾಪಟ್ಟಿ ವಿವರವನ್ನು ಡಿಎಸ್‌ಯು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

‘ಪ್ರತಿ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆವೃತ್ತಿ ಜೀವನದ ಆಯ್ಕೆಗಳ ಕುರಿತು ತಜ್ಞರು ವೆಬಿನಾರ್‌ಗಳಲ್ಲಿ ಮಾತನಾಡಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಹ್ವಾನಿಸಲಾಗುತ್ತದೆ. ವೆಬಿನಾರ್‌ಗಳಲ್ಲಿ ಭಾಗವಹಿಸಲು3,150 ವಿದ್ಯಾರ್ಥಿಗಳು ಈಗಾಗಲೇ ಆಸಕ್ತಿ ತೋರಿಸಿದ್ದಾರೆ’ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT