ಬುಧವಾರ, ಫೆಬ್ರವರಿ 19, 2020
30 °C

ಟೇರೆಸ್‌ನಿಂದ ಬಿದ್ದು ಕೆಎಸ್‍ಆರ್‌ಪಿ ಕಾನ್‌ಸ್ಟೆಬಲ್‌ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿಗೃಹದ ಮೂರನೇ ಮಹಡಿಯ ಟೇರೆಸ್‌ನಿಂದ ಆಯ ತಪ್ಪಿ ಬಿದ್ದು ರಾಜ್ಯ ಮೀಸಲು ಪಡೆಯ (ಕೆಎಸ್‍ಆರ್‌ಪಿ) ಕಾನ್‌ಸ್ಟೆಬಲ್‌ ಮೃತಪಟ್ಟ ಘಟನೆ ಕೋರಮಂಗಲದಲ್ಲಿ ನಡೆದಿದೆ.

9ನೇ ಬೆಟಾಲಿಯನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ.ಎನ್. ಮುದ್ರೆ (59) ಮೃತಪಟ್ಟವರು.

ಕೋರಮಂಗಲದಲ್ಲಿರುವ ವಸತಿಗೃಹದಲ್ಲಿ ನೆಲೆಸಿದ್ದ ಮುದ್ರೆ ಅವರು, ಟ್ಯಾಂಕ್‍ನಲ್ಲಿ ನೀರು ಇದೆಯೇ ಎಂದು ಪರಿಶೀಲಿಸಲು ಬುಧವಾರ ಬೆಳಿಗ್ಗೆ 6.20ರ ಸುಮಾರಿಗೆ ಟೇರೆಸ್‍ಗೆ ತೆರಳಿದ್ದರು. ಈ ವೇಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

‘ಮುದ್ರೆ ಅವರು ದಿನಾ ಬೆಳಿಗ್ಗೆ ಟ್ಯಾಂಕ್‍ನಲ್ಲಿ ನೀರಿದೆಯೇ ಎಂದು ಪರಿಶೀಲಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಕೂಡಾ ಹೋಗಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದರು. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)