ಬೆಂಗಳೂರು: ಲಘು ಉದ್ಯೋಗ ಭಾರತಿ ಕರ್ನಾಟಕ, ಐಎಂಎಸ್ ಪ್ರತಿಷ್ಠಾನ ಮತ್ತು ಮಿಲೆಟ್ಸ್‌ಕಾರ್ಟ್ ಆಶ್ರಯದಲ್ಲಿ ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿರುವ ಅಬಲಾಶ್ರಮದಲ್ಲಿ ಅ.28 ಹಾಗೂ 29ರಂದು ದೀಪಾವಳಿ ಮೇಳ ಆಯೋಜನೆಗೊಂಡಿದೆ. ಎರಡೂ ದಿನ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಮೇಳ ನಡೆಯಲಿದೆ.

ದೀಪಾವಳಿ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಯ ಜತೆಗೆ ಆಹಾರ ಮೇಳವೂ ಆಯೋಜನೆಗೊಂಡಿದೆ. ಇದರಲ್ಲಿ ಸಾಂಪ್ರದಾಯಿಕ ಆರೋಗ್ಯಯುಕ್ತ ಆಹಾರ, ಕುರ್ತಿಗಳು, ಮಕ್ಕಳ ಉಡುಪು, ಕರಕುಶಲ ಆಭರಣಗಳು, ಗಿಡಮೂಲಿಕೆಯುಕ್ತ ಸಾಬೂನುಗಳು ಹಾಗೂ ಪ್ರಸಾಧನ ಸಾಮಗ್ರಿ, ಸಾಂಪ್ರದಾಯಿಕ ಜೂಟ್ ಚೀಲಗಳು, ಟೆರ್ರಾಕೋಟಾ ಆಭರಣ, ಸೆಗಣಿ ಹಾಗೂ ಇತರ ನೈಸರ್ಗಿಕ ವಸ್ತುಗಳಿಂದ ಸಿದ್ಧಗೊಂಡ ಹಣತೆಗಳು, ದೀಪಾವಳಿ ಸಿಹಿ, ಉಡುಗೊರೆ ಹೀಗೆ ಇನ್ನೂ ಹಲವು ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.