ಬುಧವಾರ, ಸೆಪ್ಟೆಂಬರ್ 22, 2021
23 °C

ಹಲ್ಲೆಯಾದ ವ್ಯಕ್ತಿಯ ಜಾತಿ ಬಗ್ಗೆ ಸುಳ್ಳು: ಇಂದ್ರಜಿತ್ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಟ ದರ್ಶನ್ ಅವರಿಂದ ಹೋಟೆಲ್‌ನಲ್ಲಿ ಹಲ್ಲೆಗೆ ಒಳಗಾದ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದವನು’ ಎಂದು ಸುಳ್ಳು ಹೇಳುವ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪರಿಶಿಷ್ಟ ಪದವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆದಿ ಜಾಂಬವ ಜನಸಂಘ ಹಾಗೂ ಮೂಲ ನಿವಾಸಿ ಅಂಬೇಡ್ಕರ್ ಸೇನೆ ಆರೋಪಿಸಿವೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿ ಜಾಂಬವ ಜನಸಂಘದ ನಗರ ಜಿಲ್ಲಾ ಯುವ ಘಟಕದ ಅಧ್ಯಕ್ಷ ವೇಣು, ‘ಪರಿಶಿಷ್ಟ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದು ಇಂದ್ರಜಿತ್ ಆರೋಪಿಸಿದ್ದರು. ಆದರೆ, ಆ ವ್ಯಕ್ತಿಯೇ ಮಾಧ್ಯಮಗಳ ಎದುರು ‘ತಾನು ಪರಿಶಿಷ್ಟನಲ್ಲ, ಅಂತಹ ಜಾತಿಗೆ ಸೇರಿದವನಲ್ಲ’ ಎಂದು ಸಮುದಾಯಕ್ಕೆ ಅವಮಾನವಾಗುವಂತೆ ಸ್ಪಷ್ಟನೆ ನೀಡಿ
ದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂದ್ರಜಿತ್, ಪರಿಶಿಷ್ಟ ಹೆಸರನ್ನು ಬಿಂಬಿಸಿ, ಇಡೀ ಸಮುದಾಯವನ್ನು ದರ್ಶನ್‌ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಷಡ್ಯಂತ್ರ ನಡೆಸಿದ್ದಾರೆ. ಸಮುದಾಯವನ್ನು ಅವಮಾನಗೊಳಿಸಿರುವ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು