ಬೆಂಗಳೂರು: ‘ಸರ್ಕಾರಕ್ಕೆ ಧರ್ಮ ಇರಬಾರದು ಎಂದು ಅಂಬೇಡ್ಕರ್ ಸಂವಿಧಾನ ತಂದರು. ಶೋಷಿತರಿಗೆ ಸಿಗದ ಶಿಕ್ಷಣ, ಸಮಾನತೆ, ಶೋಷಣೆ ವಿರುದ್ಧದ ಜನರಿಗೆ ಹಕ್ಕು ನೀಡಿದರು. ಅಂಬೇಡ್ಕರ್ ಕನಸಿನ ಸಂವಿಧಾನ ಆಚರಣೆಗೆ ತರಬೇಕಾದರೆ ಅವರ ಆಶಯ ಈಡೇರಿಸುವ ಕಾರ್ಯ ಆಗಬೇಕು’ ಎಂದು ಬಿಜೆಪಿಯ ಎನ್. ರವಿಕುಮಾರ್ ಹೇಳಿದರು.

ವಿಧಾನಪರಿಷತ್ನಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ಇಲ್ಲದಿರುತ್ತಿದ್ದರೆ ಎಲ್ಲ ವರ್ಗದವರಿಗೆ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಉದ್ಯೋಗ, ಬಡ್ತಿ ಯಾವುದೂ ಇರುತ್ತಿರಲಿಲ್ಲ. ಆದರೆ, ಪ್ರಜಾಪ್ರಭುತ್ವ ಇಂದು ಹಣ, ಅಧಿಕಾರ ಉಳ್ಳವರ ಸ್ವತ್ತಾಗಿದೆ’ ಎಂದರು.

‘ಶೋಷಣೆ, ಮೇಲುಕೀಳು ಇಂದಿಗೂ ಜಾರಿಯಲ್ಲಿದೆ. ಕಾನೂನಿನಲ್ಲಿ ಅಸಮಾನತೆ ಇಲ್ಲದಿದ್ದರೂ ಆಚರಣೆಯಲ್ಲಿ ಇದೆ. ಕಳೆದ 70 ವರ್ಷಗಳಲ್ಲಿ ಬಹಳಷ್ಟು ಮಂದಿ ಮೇಧಾವಿಗಳು ಆಗಿ ಹೋಗಿದ್ದಾರೆ. ಆದರೆ, ನೆನಪಿನಲ್ಲಿ ಉಳಿಯುವಂಥವರು ಕೆಲವರು ಮಾತ್ರ. ದೇಶದ ಇತಿಹಾಸದಲ್ಲಿ ಹಿಂದುಗಳಷ್ಟೇ ಮುಸಲ್ಮಾನರ ಕೊಡುಗೆಯೂ ಸಾಕಷ್ಟಿದೆ. ಜಾತ್ಯತೀತ ಸಂವಿಧಾನವನ್ನು ಅಂಬೇಡ್ಕರ್ ನೀಡಿರುವುದೇ ಇದಕ್ಕೆ ಪ್ರೇರಣೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.