ಬೆಂಗಳೂರು: ಜೀವಿತ ಪ್ರಮಾಣಪತ್ರವನ್ನು (ಲೈಫ್ ಸರ್ಟಿಫಿಕೇಟ್) ಆನ್ಲೈನ್ನಲ್ಲಿಯೇ ಸಲ್ಲಿಸಲು ಪಿಂಚಣಿದಾರರಿಗೆ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್ಒ) ಅವಕಾಶ ನೀಡಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ, ಜನದಟ್ಟಣೆ ಮತ್ತು ಹಿರಿಯ ನಾಗರಿಕರು ಕಚೇರಿಗೆ ಓಡಾಡುವುದನ್ನು ತಪ್ಪಿಸಲು ಇಪಿಎಫ್ಒ ಈ ನಿರ್ಧಾರ ಕೈಗೊಂಡಿದೆ.

2021ರಿಂದ ಡಿಜಿಟಲ್ ‘ಜೀವಿತ ಪ್ರಮಾಣಪತ್ರ’ ನೀಡಲು ಸಂಘಟನೆ ಮುಂದಾಗಿದೆ. ಪಿಂಚಣಿದಾರರು ತಾವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಶಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಈ ಬಾರಿ ಪ್ರಮಾಣಪತ್ರ ಸಲ್ಲಿಸಿದ ತಿಂಗಳಿನಿಂದ 12 ತಿಂಗಳುಗಳವರೆಗೆ ಮಾನ್ಯವಾಗಿರುತ್ತದೆ.

ಪಿಂಚಣಿದಾರರು ತಮ್ಮ ಮೊಬೈಲ್ ಫೋನ್ನಲ್ಲಿನ ಉಮಂಗ್ ಆ್ಯಪ್ಗೆ ಬಯೊಮೆಟ್ರಿಕ್ ಸಾಧನವನ್ನು ಅಳವಡಿಸಿಕೊಂಡಿದ್ದರೆ, ಆ ಮೂಲಕವೂ ಈ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಇಪಿಎಫ್ಒದ ಬೆಂಗಳೂರು (ಕೇಂದ್ರ) ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.