ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಬಗೆಗಿನ ಚರ್ಚೆ ದುರಂತ: ಸುಭಾಷ್ ಭರಣಿ ಅಭಿಮತ

ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ಭರಣಿ ಅಭಿಮತ
Published 17 ಏಪ್ರಿಲ್ 2024, 14:29 IST
Last Updated 17 ಏಪ್ರಿಲ್ 2024, 14:29 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮಾಯಣವನ್ನು ವಾಲ್ಮೀಕಿ, ಮಹಾಭಾರತವನ್ನು ವ್ಯಾಸರು ಬರೆದಿದ್ದು ಎಷ್ಟಿರ ಮಟ್ಟಿಗೆ ಸತ್ಯವೊ, ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿರುವುದೂ ಅಷ್ಟರ ಮಟ್ಟಿಗೆ ನಿಜ. ಈ ಕುರಿತು ಚರ್ಚೆ ನಡೆಯುತ್ತಿರುವುದು ನಿಜಕ್ಕೂ ದುರಂತ’ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ಭರಣಿ ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಹಮ್ಮಿಕೊಂಡ ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ಬುದ್ಧ-ಬಸವ-ಅಂಬೇಡ್ಕರ್ ಅವರು ಈ ದೇಶದ ಯುಗಪುರುಷರು. ಅವರು ಸಾಂಸ್ಕೃತಿಕ ಚಹರೆಯನ್ನು ಬದಲಾಯಿಸಿದರು. ಕಡು ಬಡತನದಲ್ಲಿ ಅರಳಿದ ಅಂಬೇಡ್ಕರ್, ಬಹು ಎತ್ತರಕ್ಕೆ ಏರಿದರು. ಅವರು ತಾವು ಬಂದ ಹಾದಿಯನ್ನು ಮರೆಯದೆ, ಎಲ್ಲ ರಂಗದಲ್ಲಿಯೂ ಸಮಾನತೆಗೆ ಪ್ರಯತ್ನಿಸಿದರು. ಅವರಿಗೆ ಸಾಮಾಜಿಕ ಸ್ವಾತಂತ್ರ್ಯವು ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿತ್ತು. ಮಹಿಳೆಯರಿಗೆ ಸಮಾನತೆ ಹಕ್ಕ ದೊರಕುವಂತೆ ಮಾಡಲು ಅವರು ನಿರಂತರವಾಗಿ ಶ್ರಮಿಸಿದರು’ ಎಂದು ಹೇಳಿದರು. 

ಬೆಂಗಳೂರು ನಗರ ವಿಶ್ವವಿದ್ಯಾಲಯದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಿ.ಬಿ.ಹೊನ್ನಸಿದ್ದಾರ್ಥ, ‘ಸಂವಿಧಾನದ ಮಹತ್ವವನ್ನು ನಮ್ಮ ಸಮಾಜದಲ್ಲಿ ಇನ್ನೂ ಅನೇಕರು ಅರಿತಿಲ್ಲ. ನಮ್ಮಲ್ಲಿ ವಿದ್ಯಾವಂತ ಅನಕ್ಷರಸ್ಥರೂ ಇದ್ದಾರೆ. ಅಂಬೇಡ್ಕರ್ ಅವರು ದೇಶ ಕಂಡ ದೊಡ್ಡ ಚಿಂತಕ ಮತ್ತು ಸುಧಾರಕ. ಅವರ ಚಿಂತನೆಗಳನ್ನು ಎಲ್ಲೆಡೆ ಪಸರಿಸುವುದು ನಮ್ಮ ಕರ್ತವ್ಯ’ ಎಂದರು. 

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಲ್ಲ. ಅವರು ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿ ಹೋರಾಟ ಮಾಡಿದ ಮಾನವೀಯತೆಯ ಹರಿಕಾರ. ಭಾರತ ಸಮಾಜದಲ್ಲಿ ಸಮಾನತೆಯ ಹೊಸ ಪರಂಪರೆಯನ್ನು ರೂಪಿಸಲು ಅವರು ಪ್ರಯತ್ನಿಸಿದರು. ‘ಸಂವಿಧಾನದ ಶಿಲ್ಪಿ’ ಎಂದೇ ಕರೆಸಿಕೊಂಡಿರುವ ಅವರು, ಸಾಮಾಜಿಕ ನ್ಯಾಯವನ್ನು ಸಾಧಿಸಲು ವಿಶೇಷ ಪ್ರಯತ್ನ ಮಾಡಿದರು’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT