‘ವಸತಿಗೃಹದಲ್ಲಿ ನೆಲೆಸದ ವೈದ್ಯರು’

7

‘ವಸತಿಗೃಹದಲ್ಲಿ ನೆಲೆಸದ ವೈದ್ಯರು’

Published:
Updated:

ಬೆಂಗಳೂರು: ಹೆಸರಘಟ್ಟ ಹೋಬಳಿ ಐವರಕಂಡಪುರ ಗ್ರಾಮದಲ್ಲಿರುವ ಹೆರಿಗೆ ಆಸ್ಪತ್ರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಲಕ್ಷ್ಮಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ದಿಢೀರ್ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿದರು.

‘ಜ್ವರ ಎಂದು ಆಸ್ಪತ್ರೆಗೆ ಬಂದರೆ ಡಾಕ್ಟರ್ ಇಲ್ಲ. ನರ್ಸ್‍ಗಳನ್ನು ಕೇಳಿದ್ರೆ ಇವತ್ತು ಬಂದ್ ಇದೆ, ಹೇಗೆ ಬರ್ತಾರೆ, ಬೇರೆ ಕಡೆ ಹೋಗ್ರಿ ಎಂದು ಗದರಿಸಿದರು. ವೈದ್ಯರಿಗೆ ಕರೆ ಮಾಡಿದರೆ ನಾನು ಬರುವುದಿಲ್ಲ. ತಲೆ ತಿನ್ನಬೇಡಿ ಇಡ್ರಿ ಪೋನ್ ಎನ್ನುತ್ತಾರೆ. ನಾವು ಎಲ್ಲಿಗೆ ಸ್ವಾಮಿ ಹೋಗೋದು?’ ಎಂದು ರೋಗಿಯೊಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯರ ಬಳಿ ಅಳಲು ತೋಡಿಕೊಂಡರು.

ಆಸ್ಪತ್ರೆಯ ಹಾಜರಿ ಪುಸ್ತಕವನ್ನು ಪರಿಶೀಲಿಸಿದ ಎಂ.ಬಿ.ಕೃಷ್ಣಯ್ಯ ಪ್ರತಿ ದಿನ ಸಹಿ ಮಾಡದೇ ಇರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !