ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರ ಭವನದಲ್ಲಿ ನಾಯಿಗಳ ಹಾವಳಿ: ಉಪಸಭಾಪತಿ ರುದ್ರಪ್ಪ ಲಮಾಣಿ

Published : 2 ಸೆಪ್ಟೆಂಬರ್ 2024, 20:36 IST
Last Updated : 2 ಸೆಪ್ಟೆಂಬರ್ 2024, 20:36 IST
ಫಾಲೋ ಮಾಡಿ
Comments

ಹಾವೇರಿ: ‘ಬೆಂಗಳೂರಿನ ಶಾಸಕರ ಭವನದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಶಾಸಕರು ದೂರು ನೀಡಿದ್ದು, ಆ ಸಮಸ್ಯೆಯನ್ನು ಬಗೆಹರಿಸಬೇಕಿದೆ’ ಎಂದು ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ಇಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಸವಣೂರು ತಾಲ್ಲೂಕಿನಲ್ಲಿ 4 ತಿಂಗಳಲ್ಲಿ 551 ಮಂದಿಗೆ ನಾಯಿ ಕಡಿತದಿಂದ ಗಾಯವಾಗಿದೆ. ಹಾವೇರಿ ತಾಲ್ಲೂಕಿನಲ್ಲೂ ಪ್ರಕರಣ ಹೆಚ್ಚಿವೆ’ ಎಂದರು.

‘ನಾಯಿಗಳನ್ನು ಹಿಡಿದು ಬೇರೆಡೆ ಬಿಡಲು ಪ್ರಯತ್ನಿಸಿದರೆ, ಪ್ರಾಣಿ ದಯಾ ಸಂಘದವರು ಆಕ್ಷೇಪಿಸುತ್ತಾರೆ. ನಾಯಿಗಳ ಸ್ಥಳಾಂತರ ವಿಷಯ ದೊಡ್ಡ ಸಮಸ್ಯೆಯಾಗಿದೆ. ಶಾಸಕರ ಭವನದಲ್ಲೇ ನಾಯಿಗಳ ಸಮಸ್ಯೆ ಬಗ್ಗೆ ಶಾಸಕರು ದೂರಿದ್ದಾರೆ. ಮುಂದೆ ನಾಯಿ ವಿಷಯವೇ ಚುನಾವಣೆಗೆ ವಿಷಯವಾಗಬಹುದು’ ಎಂದರು. ಇದಕ್ಕೆ ಉತ್ತರಿಸಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿ, ‘ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ ಬೀದಿ ನಾಯಿಗಳ ಸಂತಾನಹರಣ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT