ಶನಿವಾರ, ಅಕ್ಟೋಬರ್ 1, 2022
20 °C

ಟಾಯ್ಲೆಟ್ ಬ್ರಶ್‌ಗಳ ಜೊತೆ ಪಿಜ್ಜಾಗೆ ಬಳಸುವ ಹಿಟ್ಟು! ಡೊಮಿನೋಸ್ ವಿರುದ್ದ ಆಕ್ರೋಶ

ಪ್ರಜಾವಾಣಿ ವೆಬ್ ಡೆಸ್ಕ್‌  Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೊಮಿನೋಸ್ ಪಿಜ್ಜಾ ಅಂಗಡಿಯೊಂದರಲ್ಲಿ ಪಿಜ್ಜಾ ಮಾಡಲು ಬಳಸುವ ಹಿಟ್ಟಿನ ಉಂಡಿಗಳನ್ನು ಶೌಚಾಲಯದಲ್ಲಿ ಬಳಸುವ ಬ್ರಶ್‌ಗಳ ಜೊತೆಗೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಈ ಫೋಟೊವನ್ನು ಬೆಂಗಳೂರಿನ ಸಾಹಿಲ್ ಕಾರಣ್ಯ ಎನ್ನುವವರು ಹಂಚಿಕೊಂಡು ‘ನೋಡಿ, ಡೊಮಿನೋಸ್ ನಮಗೆ ಅತ್ಯಂತ ತಾಜಾ ಆಗಿರುವ ಪಿಜ್ಜಾ ಡೆಲಿವರಿ ಮಾಡುವ ವಿಧಾನ, ಅತ್ಯಂತ ಅಸಹ್ಯಕರ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರೇ ಹೇಳಿರುವ ಪ್ರಕಾರ ಇದು ನಡೆದಿರುವುದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಚೂಢಸಂದ್ರದ ಬಳಿಯ ಹೊಸ ರೋಡ್ ಡೊಮಿನೋಸ್ ಪಿಜ್ಜಾ ಕೇಂದ್ರದಲ್ಲಿ ಎಂದು ತಿಳಿದು ಬಂದಿದೆ.

ಡೊಮಿನೋಸ್‌ನ್ನು ಟ್ಯಾಗ್ ಮಾಡಿ ಸಾಹಿಲ್ ಈ ಟ್ವಿಟ್ ಮಾಡಿರುವುದರಿಂದ ಡೊಮಿನೋಸ್ ಕೇರ್‌ನವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ವಿವರವಾದ ದೂರು ನೀಡಿ, ನಾವು ಖಂಡಿತವಾಗಿಯೂ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ.

ಸಾಹಿಲ್ ಅವರ ಈ ಟ್ವೀಟ್ ವೈರಲ್ ಆಗಿದ್ದು, ಅನೇಕ ಪಿಜ್ಜಾ ಪ್ರೇಮಿಗಳು ಪಿಜ್ಜಾದ ಹಿಟ್ಟು ಈ ರೀತಿ ಟಾಯ್ಲೆಟ್ ಬ್ರಶ್‌ಗಳ ಜೊತೆ ಇಟ್ಟಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು