ಪೀಣ್ಯ ದಾಸರಹಳ್ಳಿ: ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಡಿ.ಪಿ. ದಾನಪ್ಪ ಅಧಿಕಾರ ಸ್ವೀಕರಿಸಿದರು.

ನೂತನ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ದಾನಪ್ಪ ನೇತೃತ್ವದ ತಂಡಕ್ಕೆ ಮಾಜಿ ಅಧ್ಯಕ್ಷ ಆರ್. ಶಿವಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು.

‘ಪೀಣ್ಯ ಕೈಗಾರಿಕಾ ಪ್ರದೇಶ ಟೌನ್ಶಿಪ್ ಪ್ರಾಧಿಕಾರ ರಚನೆ, ಕಚ್ಚಾ ವಸ್ತುಗಳ ಮೇಲಿನ ಅವೈಜ್ಞಾನಿಕ ತೆರಿಗೆ, ವಿದ್ಯುತ್ ದರ, ನೀರಿನ ದರ ಹೆಚ್ಚಳಕ್ಕೆ ವಿರೋಧ, ಕಸಕ್ಕೆ ವಿಧಿಸುತ್ತಿರುವ ದುಬಾರಿ ಶುಲ್ಕ, ಕನಿಷ್ಠ ವೇತನ, ಮಹಿಳೆಯರ ಹಾಸ್ಟೆಲ್ ಸೇರಿದಂತೆ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲಾಗುವುದು' ಎಂದು ದಾನಪ್ಪ ಹೇಳಿದರು.

ಪದಾಧಿಕಾರಿಗಳು: ಅಧ್ಯಕ್ಷ– ಡಿ.ಪಿ. ದಾನಪ್ಪ, ಹಿರಿಯ ಉಪಾಧ್ಯಕ್ಷ– ಡಿ.ಎಚ್. ಪಾಟೀಲ್, ಉಪಾಧ್ಯಕ್ಷ– ಎಂ. ಚಂದ್ರಶೇಖರ್, ಕಾರ್ಯದರ್ಶಿ– ಬೀರಪ್ಪ ಬಿ, ಜಂಟಿ ಕಾರ್ಯದರ್ಶಿ– ಬಿ. ತಿಮ್ಮಯ್ಯ, ಖಜಾಂಚಿ– ಸೆಲ್ವ ಕುಮಾರ್, ಜಂಟಿ ಖಜಾಂಚಿ– ಎಂ.ಆರ್. ರಂಗಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.