ಬುಧವಾರ, ಜನವರಿ 22, 2020
16 °C
15 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ

ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಡಾ.ಕಜೆ ಮರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಸರ್ವಾನುಮತದಿಂದ 5ನೇ ಬಾರಿ ಡಾ.ಗಿರಿಧರ ಕಜೆ ಆಯ್ಕೆಯಾಗಿದ್ದಾರೆ.

ಮಹಾಸಭೆ 76ನೇ ವರ್ಷದ ಸರ್ವಸದಸ್ಯರ ಸಭೆ ನಗರದ ಹವ್ಯಕ ಭವನದಲ್ಲಿ ಭಾನುವಾರ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ,ಕೊಡಗು, ಕಾಸರಗೋಡು ವ್ಯಾಪ್ತಿಯ15 ನಿರ್ದೇಶಕ ಸ್ಥಾನ
ಗಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿ
ಕಾರಿ ರಾಮಭಟ್ ನೂತನ ನಿರ್ದೇಶಕರ ಹೆಸರು ಘೋಷಿಸಿದರು.

ಮುಂದಿನ ಸಾಲಿಗೆ ಉಪಾಧ್ಯಕ್ಷರಾಗಿ ಶ್ರೀಧರ ಜೆ.ಭಟ್ ಕೆಕ್ಕಾರು, ಆರ್.ಎಂ. ಹೆಗಡೆ ಬಾಳೇಸರ ನೇಮಕರಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾಗಿ ಪ್ರಶಾಂತಕುಮಾರ ಭಟ್ ಯಲ್ಲಾಪುರ, ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಆಯ್ಕೆಯಾದರು.

ಗಾಯತ್ರಿ ಮಹೋತ್ಸವ: ‘‌ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿರುವುದು ಸಮಾಜದಲ್ಲಿನ ಸಂಘಟನೆಯ ಶಕ್ತಿ ಹಾಗೂ ಒಗ್ಗಟ್ಟು ತೋರಿಸುತ್ತದೆ. ಸಮಾಜವನ್ನು ಒಡೆಯುವ ಪ್ರಯತ್ನಗಳ ಶಕ್ತಿ
ಕುಂದುವ ಜತೆಗೆ ಹೀನ ಮನಸ್ಕರ ಧ್ವನಿ ಅಡಗಿದೆ’ ಎಂದು ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ ಅವರು ಹರ್ಷ ವ್ಯಕ್ತಪಡಿಸಿದರು. 

‘ಹವ್ಯಕ ಮಹಾಸಭೆಯಿಂದ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ
‘ಗಾಯತ್ರಿ ಮಹೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)