ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಚರಂಡಿ ಕಾಮಗಾರಿ: ರಸ್ತೆಯಲ್ಲಿ ಗುಂಡಿ. ಬಿರುಕು

Published 14 ಮೇ 2024, 16:36 IST
Last Updated 14 ಮೇ 2024, 16:36 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ದುಬಾಸಿ ಪಾಳ್ಯದ ಕೆರೆ ಪಕ್ಕದ ರಸ್ತೆಯಲ್ಲಿ (ಆರ್‌.ವಿ.ಕಾಲೇಜಿನ ಕಡೆಗೆ ಹೋಗುವ ಮಾರ್ಗ) ಗುಂಡಿಗಳಾಗಿದ್ದು, ಕೆಲವು ಕಡೆ ಬಿರುಕು ಬಿಟ್ಟಿದೆ.

ದುಬಾಸಿಪಾಳ್ಯ ಕೆರೆಗೆ ಹರಿಯುತ್ತಿದ್ದ ಒಳಚರಂಡಿ ನೀರನ್ನು ತಪ್ಪಿಸಲು ನಾಗದೇವನಹಳ್ಳಿಯ ರಾಮನಾಥ್ ನಗರದಿಂದ ದುಬಾಸಿಪಾಳ್ಯದ ಕೆರೆ ಕೋಡಿವರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ) ಹೊಸದಾಗಿ ಒಳಚರಂಡಿ ಕಾಮಗಾರಿ ಕೈಗೊಂಡಿತ್ತು. ₹1.20 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಯ ಭಾಗವಾಗಿ ಪೈಪ್‌ಗಳನ್ನು ಜೋಡಿಸಿರುವ ಜಾಗದಲ್ಲಿ ಗುಂಡಿಗಳಾಗಿವೆ.

‘ಒಳಚರಂಡಿ ಕಾಮಗಾರಿ ಕಳಪೆಯಾಗಿರುವುದರಿಂದ ರಸ್ತೆಗಳು ಗುಂಡಿ ಬೀಳಲು ಕಾರಣವಾಗಿದೆ‘ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಕಳಪೆ ಕಾಮಗಾರಿ ಜೊತೆಗೆ, ಒಳಚರಂಡಿಗೆ ಅಳವಡಿಸಿರುವ ಪೈಪುಗಳ ಗುಣಮಟ್ಟದ ಬಗ್ಗೆಯೂ ಅನುಮಾನವಿದೆ. ಮಳೆಗಾಲ ಪ್ರಾರಂಭವಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ಸರಿಪಡಿಸಬೇಕು‘ ಎಂದು ಸ್ಥಳೀಯ ಎನ್‌.ಸಿ.ಕುಮಾರ್‌ ಒತ್ತಾಯಿಸಿದ್ದಾರೆ. 

ಬಿಡಬ್ಲ್ಯುಎಸ್‌ಎಸ್‌ಬಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಶಿಕುಮಾರ್‌, ‘ಒಳ ಚರಂಡಿಗೆ ಹಾಕಲಾಗಿದ್ದ ಹಳೆಯ ಪೈಪ್‌ಗಳನ್ನು ಬದಲಾಯಿಸಿ, ಹೊಸದಾಗಿ ಕಾಮಗಾರಿ ಕೈಗೊಂಡಿದ್ದೇವೆ. ಮುನೇಶ್ವರ ದೇವಸ್ಥಾನದ ಬಳಿ ಬಂಡೆ ಸಿಕ್ಕಿದ್ದರಿಂದ, ಕಾಮಗಾರಿ ವಿಳಂಬವಾಗಿ, ಒಳಚರಂಡಿ ನೀರು ಸರಾಗವಾಗಿ ಹರಿಯದೆ ಗುಂಡಿಗಳಾಗಿವೆ. ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ರಸ್ತೆ ಬಿರುಕುಬಿಟ್ಟಿರುವುದು
ರಸ್ತೆ ಬಿರುಕುಬಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT