ಶುಕ್ರವಾರ, ಮೇ 14, 2021
32 °C

₹ 2.50 ಲಕ್ಷ ಮೌಲ್ಯದ ‘ಡ್ರಗ್ಸ್’; ಪೆಡ್ಲರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಫೋಫನ್ ಚೇಕನ್ ಅಲಿಯಾಸ್ ಜೇಮ್ಸ್ (27) ಎಂಬಾತನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾದ ಫೋಫನ್, ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ. ಜಯಂತಿನಗರದಲ್ಲಿ ನೆಲೆಸಿದ್ದ. ತನ್ನದೇ ಜಾಲ ರೂಪಿಸಿಕೊಂಡು ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಎಚ್‌ಬಿಆರ್‌ ಲೇಔಟ್‌ನ 5ನೇ ಹಂತದ ಅಂಬೇಡ್ಕರ್ ಮೈದಾನ ಬಳಿಯ ರಸ್ತೆಯಲ್ಲಿ ಆರೋಪಿ ಡ್ರಗ್ಸ್ ಮಾರಲು ಬಂದಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ. ₹ 2.64 ಲಕ್ಷ ಮೌಲ್ಯದ 10 ಗ್ರಾಂ ತೂಕದ ಕೊಕೇನ್ ಹಾಗೂ 1.5 ಗ್ರಾಂ ತೂಕದ ಹೆರಾಯಿನ್ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಹೆಚ್ಚಿದ್ದು, ಅದರ ಮಾರಾಟಗಾರರನ್ನು ಪತ್ತೆ ಮಾಡುತ್ತಿದ್ದೇವೆ. ಈ ಹಿಂದೆ ₹ 4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಹಲವರನ್ನು ಬಂಧಿಸಲಾಗಿತ್ತು. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದೂ ಹೇಳಿದರು.

ಮಾಲೀಕರ ವಿರುದ್ಧ ಕ್ರಮ: ‘ನೈಜೀರಿಯಾದಿಂದ ಬಂದಿದ್ದ ಆರೋಪಿಗೆ ಸ್ಥಳೀಯರೊಬ್ಬರು ಬಾಡಿಗೆ ಮನೆ ನೀಡಿದ್ದರು. ಆರೋಪಿ ವೀಸಾ ಅವಧಿ ಮುಗಿದರೂ ಮನೆ ಖಾಲಿ ಮಾಡಿಸಿರಲಿಲ್ಲ. ಆತನ ಬಗ್ಗೆ ಠಾಣೆಗೂ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಮನೆ ಮಾಲೀಕನ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು