ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಸಾಗಣೆ: ರೈಲ್ವೆ ಗುತ್ತಿಗೆ ನೌಕರರ ಬಂಧನ

Last Updated 20 ಅಕ್ಟೋಬರ್ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ರೈಲುಗಳ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ರೈಲ್ವೆ ಇಲಾಖೆಯ ಮೂವರು ಗುತ್ತಿಗೆ ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಅಸ್ಸಾಂನ ರಾಜೇಶ್ ಪಾಲ್, ಬಪ್ಪಾ ಕರ್ಡೆ ಹಾಗೂ ಪಿಂಟು ದಾಸ್ ಬಂಧಿತರು. ರೈಲ್ವೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೂವರು, ವ್ಯವಸ್ಥಿತವಾಗಿ ಡ್ರಗ್ಸ್ ಸಾಗಿಸುತ್ತಿದ್ದರು. ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದ ಪೆಡ್ಲರ್‌ ನೀಡಿದ್ದ ಮಾಹಿತಿ ಆಧರಿಸಿ ಮೂವರನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಆರೋಪಿಗಳಿಗೆ ರೈಲುಗಳಲ್ಲಿ ಲಾಕರ್‌ಗಳನ್ನು ನೀಡಲಾಗಿತ್ತು. ಅದೇ ಲಾಕರ್‌ಗಳಲ್ಲಿ ಅಸ್ಸಾಂನಿಂದ ಗಾಂಜಾ ಬಚ್ಚಿಟ್ಟುಕೊಂಡು ತರುತ್ತಿದ್ದ ಆರೋಪಿಗಳು, ಬೆಂಗಳೂರಿನಲ್ಲಿ ಪೆಡ್ಲರ್‌ಗಳಿಗೆ ತಲುಪಿಸುತ್ತಿದ್ದರು. ಸದ್ಯ ಆರೋಪಿಗಳಿಂದ ₹ 80 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT