ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ: ₹ 4.83 ಕೋಟಿ ಮೌಲ್ಯದ ಆಸ್ತಿ ಇ.ಡಿ ವಶಕ್ಕೆ

ಬರೋಡಾ ಬ್ಯಾಂಕ್‌ಗೆ ₹ 12 ಕೋಟಿ
Last Updated 25 ಮಾರ್ಚ್ 2021, 3:34 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಆಭರಣಗಳನ್ನು ಅಡವಿಟ್ಟು ಬ್ಯಾಂಕ್‌ ಆಫ್‌ ಬರೋಡಾದ ಕೆಂಗೇರಿ ಶಾಖೆಯಿಂದ ₹ 12 ಕೋಟಿ ಮೊತ್ತದ 186 ಚಿನ್ನಾಭರಣ ಸಾಲಗಳನ್ನು ಪಡೆದು ವಂಚಿದಿಸಿದ್ದ ಪ್ರಕರಣದ ಪ್ರಮುಖ ಆರೋಪಿಗೆ ಸೇರಿದ ₹ 4.83 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿದೆ.

ಎಸ್‌.ಕೆ. ಸುಬ್ರಮಣ್ಯ ರೆಡ್ಡಿ ಎಂಬುವವರು ಬ್ಯಾಂಕ್‌ ಆಫ್‌ ಬರೋಡಾದ ಕೆಂಗೇರಿ ಶಾಖೆಯ ವ್ಯವಸ್ಥಾಪಕ ಟಿ.ಎಲ್‌. ಪ್ರವೀಣ್‌ ಕುಮಾರ್‌ ನೆರವಿನಲ್ಲಿ 57 ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಭರಣ ಅಡವಿಟ್ಟು ಚಿನ್ನಾಭರಣ ಸಾಲ ಪಡೆದಿದ್ದರು. ಈ ಮೊತ್ತವನ್ನು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿದ್ದ ತಮ್ಮ ಸಾಲ ತೀರಿಸಲು, ಹೊಸ ಆಸ್ತಿ ಖರೀದಿಗೆ ಬಳಸಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ ತನಿಖೆ ನಡೆಸಿತ್ತು. ಸುಬ್ರಮಣ್ಯ ರೆಡ್ಡಿಗೆ ಸೇರಿದ ₹ 4.83 ಕೋಟಿ ಮೌಲ್ಯದ ಐದು ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT