ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22–23ಕ್ಕೆ ‘ಎಡ್ಯುವರ್ಸ್‌’ ಶಿಕ್ಷಣ ಮೇಳ

Last Updated 18 ಏಪ್ರಿಲ್ 2023, 23:15 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌: ಜ್ಞಾನ ದೇಗುಲ–2023’ ಇದೇ ತಿಂಗಳು 22 ಮತ್ತು 23ರಂದು ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ನಡೆಯಲಿದೆ.

ಚಲನಚಿತ್ರ ನಟ ರಮೇಶ್ ಅರವಿಂದ್ ಅವರು 13ನೇ ಆವೃತ್ತಿಯ ಮೇಳ ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಾಗೂ ಅಂತಃಶಕ್ತಿಯ ಬಲವರ್ಧನೆಗಾಗಿ ಉತ್ತಮ ಮಾರ್ಗದರ್ಶನ ಒದಗಿಸುವುದು ಈ ಶೈಕ್ಷಣಿಕ ಮೇಳದ ಉದ್ದೇಶ. 50ಕ್ಕೂ ಹೆಚ್ಚು ಅಗ್ರಗಣ್ಯ ಶೈಕ್ಷಣಿಕ ಸಂಸ್ಥೆಗಳು ಈ ಮೇಳದಲ್ಲಿ ಭಾಗಿಯಾಗಲಿದ್ದು, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸ್‌ಗಳು, ಅವಕಾಶಗಳ ಬಗ್ಗೆ ಮಾಹಿತಿ ಸಿಗಲಿದೆ. ಸಿಇಟಿ, ನೀಟ್, ಕಾಮೆಡ್–ಕೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನೇರ ಸಂವಹನದ ಅವಕಾಶ ದೊರೆಯಲಿದೆ.

ವೈದ್ಯಕೀಯ, ದಂತ, ನೀಟ್‌ ಮತ್ತು ಕಾಮೆಡ್‌–ಕೆ ಕುರಿತು ವೃತ್ತಿ ಮಾರ್ಗದರ್ಶನ ದೊರೆಯಲಿದೆ. ಶಿಕ್ಷಣ ತಜ್ಞರ ಸಾರಥ್ಯದಲ್ಲಿ ನಡೆಯಲಿರುವ ಈ ಬೃಹತ್‌ ಮೇಳದಲ್ಲಿ, ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ
ಸಿಗಲಿದೆ.

ಶಿಕ್ಷಣ ಸಾಲ ಯೋಜನೆಯ ಜತೆಗೆ ವಿಶೇಷ ಕೋರ್ಸ್‌ಗಳ ಮಾಹಿತಿಯೂ ದೊರೆಯಲಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಕಾಲೇಜುಗಳ ಮಳಿಗೆಗಳು ಮೇಳದಲ್ಲಿ ಇರಲಿವೆ. ಕಾಲೇಜಿನಲ್ಲಿನ ಕೋರ್ಸ್‌ಗಳ ಮಾಹಿತಿ, ಶುಲ್ಕ ವಿವರ, ಕೋರ್ಸ್‌ ಅಧ್ಯಯನದಿಂದ ಭವಿಷ್ಯದಲ್ಲಿ ಸಿಗುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ದೊರೆಯುತ್ತದೆ.

ನೀಟ್ ಮತ್ತು ಸಿಇಟಿ ಅಣಕು ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಟಾಪರ್ಸ್‌ಗಳಿಗೆ ₹ 1 ಲಕ್ಷದವರೆಗೆ ನಗದು ಗೆಲ್ಲುವ ಅವಕಾಶ ಇರಲಿದೆ. ಆನ್‌ಲೈನ್‌ನಲ್ಲಿ ನೋಂದಣಿ ಪ್ರಾರಂಭವಾಗಿದ್ದು, ಆಸಕ್ತರು www.eduverse.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮೇಳದ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಸ್ಥಳದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಇರಲಿದೆ.

ಹುಬ್ಬಳ್ಳಿಯಲ್ಲಿ ಇದೇ 29 ಮತ್ತು 30ರಂದು ರಾಯ್ಕರ್‌ ಪ್ರದರ್ಶನ ಮೈದಾನದಲ್ಲಿ ‘ಎಡ್ಯುವರ್ಸ್‌’ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845816919, 9743307037

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT