ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿಯ ಕ್ರೀಡೆಗಳಿಗೆ ಒತ್ತು ಅಗತ್ಯ: ರಮೇಶ್

Published 10 ಡಿಸೆಂಬರ್ 2023, 16:28 IST
Last Updated 10 ಡಿಸೆಂಬರ್ 2023, 16:28 IST
ಅಕ್ಷರ ಗಾತ್ರ

ಕೆ.ಆರ್.ಪುರ: ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಕ್ಯಾಪಿಟಲ್ ಶಾಲೆಯ ಅಧ್ಯಕ್ಷ ರಮೇಶ್ ಹೇಳಿದರು.

ಕೆ.ಆರ್.ಪುರದ ಎ. ನಾರಾಯಣಪುರದ ಕ್ಯಾಪಿಟಲ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕೊಕ್ಕೊ, ಕಬಡ್ಡಿ, ಕುಸ್ತಿ ಸೇರಿದಂತೆ ಹಲವು ದೇಶಿ ಕ್ರೀಡೆಗಳು ಮಕ್ಕಳ ಸದೃಢ ಆರೋಗ್ಯಕ್ಕೆ ಪೂರಕ. ಜೊತೆಗೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ ಎಂದರು.

ಕಿರಿಯ ವಯಸ್ಸಿನಲ್ಲಿ ಮಾಡುವ ಸಾಧನೆಗಳು ಅವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಅದು ಅವರ ಜೀವನದಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಪ್ರಾಂಶುಪಾಲ ಪ್ರಿಯವಾಸುದೇವನ್ ತಿಳಿಸಿದರು.

ಶಾಲೆಯ ನಿರ್ದೇಶಕಿ ಸುಷ್ಮಾ ರಮೇಶ್, ಪ್ರಾಂಶುಪಾಲ ಪ್ರಿಯ ವಾಸುದೇವನ್, ದೇಹಿಕ ಶಿಕ್ಷಕ ಕಿರಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT