ನಾಲ್ಕು ದಿನಗಳ ಹಿಂದೆ ಅಬ್ದುಲ್ ಕೆಲಸ ಕೇಳಿಕೊಂಡು ಥಣಿಸಂದ್ರದ ಮುಖ್ಯರಸ್ತೆಯ ಶ್ರೀದೇವಿ ವೈಭವ್ ಹೋಟೆಲ್‌ಗೆ ಬಂದಿದ್ದ. ಕೆಲಸ ನೀಡಿದ್ದ ಹೋಟೆಲ್ ಮಾಲೀಕರು ಉಳಿದುಕೊಳ್ಳಲು ಸಣ್ಣ ಕೊಠಡಿ ನೀಡಿದ್ದರು. ಆಧಾರ್ ಕಾರ್ಡ್ ನೀಡುವಂತೆ ಕೇಳಿದರೂ ಅಬ್ದುಲ್ ಕೊಟ್ಟಿರಲಿಲ್ಲ. ಆತನ ಕೊಠಡಿಯನ್ನು ಆಧಾರ್ ಕಾರ್ಡ್‌ಗಾಗಿ ಪರಿಶೀಲಿಸಿದಾಗ ಸ್ಫೋಟಕ ವಸ್ತು ಸಿಕ್ಕಿತ್ತು. ಪಿಎಸ್‌ಐ ಕುಪೇಂದ್ರ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.