ಬೆಂಗಳೂರು: ಐಟಿಸಿ ಸಿಗರೇಟ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಸಿಗರೇಟ್ ಮಾರುತ್ತಿದ್ದ ಕೇರಳದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಐಟಿಸಿ ಕಂಪನಿಯ ಪ್ರತಿನಿಧಿ ಅನ್ವೇಷ್ ಅವರ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳದ ಯೂಸುಫ್ ಅವರನ್ನು ಬಂಧಿಸಿ, ₹27 ಲಕ್ಷ ಮೌಲ್ಯದ ನಕಲಿ ಸಿಗರೇಟ್, ಗೂಡ್ಸ್ ವಾಹನ ಹಾಗೂ ಕಾರು ಜಪ್ತಿ ಮಾಡಿದ್ದಾರೆ.

‘ಐಟಿಸಿ ಕಂಪನಿಯ ಹೆಸರು ಬಳಸಿ ತಯಾರಿಸಿದ ನಕಲಿ ಸಿಗರೇಟ್ಗಳ ಪೊಟ್ಟಣಗಳನ್ನು ಜ್ಯೂಸ್ ಬಾಕ್ಸ್ಗಳಲ್ಲಿ ಇಟ್ಟು ದೆಹಲಿಯಿಂದ ನಗರಕ್ಕೆ ಸರಬರಾಜು ಮಾಡಲಾಗಿತ್ತು. ಯಾರಿಗೂ ಅನುಮಾನ ಬಾರದಂತೆ ಸೌರಾಷ್ಟ್ರ ಟ್ರ್ಯಾ ನ್ಸ್ಪೋರ್ಟ್ ಹೆಸರಿನಲ್ಲಿ ಈ ಸಿಗರೇಟ್ಗಳನ್ನು ತರಿಸಲಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

‘ಸಿಗರೇಟ್ ತುಂಬಿದ ಒಟ್ಟು 18 ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವ ಸ್ಥಳಗಳಿಗೆ ಇದನ್ನು ಪೂರೈಕೆ ಮಾಡಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ನಕಲಿ ಸಿಗರೇಟ್ ಪೊಟ್ಟಣಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.