ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಕಸ್ಟಮರ್ ಕೇರ್: ಉದ್ಯೋಗಿಗೆ ₹90 ಸಾವಿರ ವಂಚನೆ

Last Updated 30 ಸೆಪ್ಟೆಂಬರ್ 2020, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ನಕಲಿ ಕಸ್ಟಮರ್ ಕೇರ್ ಸಂಖ್ಯೆಯಿಂದ ಆನ್‍ಲೈನ್ ಮೂಲಕ ₹90 ಸಾವಿರ ವಂಚಿಸಿರುವ ಘಟನೆ ನಡೆದಿದೆ. ಶೇಷಾದ್ರಿಪುರ ನಿವಾಸಿ 29 ವರ್ಷದ ಉದ್ಯೋಗಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು.

ಕಳೆದ ಭಾನುವಾರ ಬ್ಯಾಂಕಿನ ಮೊಬೈಲ್ ಆ್ಯಪ್ ಬಳಕೆ ವೇಳೆ ಕೆಲ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಪರಿಹರಿಸಿಕೊಳ್ಳಲು ಇಂಟರ್‌ನೆಟ್‌ನಲ್ಲಿ ಬ್ಯಾಂಕ್‍ನ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿ, ಸಿಕ್ಕ ಸಂಖ್ಯೆಗೆ ಕರೆ ಮಾಡಿದಾಗ ವಂಚನೆಯಾಗಿದೆ. ಬಳಿಕ, ಅದು ನಕಲಿ ಸಂಖ್ಯೆ ಎಂದು ಅರಿವಾಗಿದೆ.

'ಕರೆ ಸ್ವೀಕರಿಸಿದ್ದ ಆನ್‍ಲೈನ್ ವಂಚಕ, ಸಮಸ್ಯೆ ಪರಿಹರಿಸುವ ನೆಪದಲ್ಲಿ ಖಾತೆಯ ವಿವರಗಳನ್ನು ಪಡೆದುಕೊಂಡರು. ಬಳಿಕ ಮೊಬೈಲ್‍ಗೆ ಬಂದಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಸಂಖ್ಯೆಯನ್ನೂ ಕೇಳಿ ಪಡೆದರು. ಇದಾದ ಕೆಲವೇ ಸಮಯದಲ್ಲಿ ನನ್ನ ಖಾತೆಯಿಂದ ₹90 ಸಾವಿರ ಕಡಿತವಾಗಿದೆ' ಎಂದು ಉದ್ಯೋಗಿ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT