ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂದಿನಿ’ ನಕಲಿ ತುಪ್ಪ: ಏಜೆನ್ಸಿ ವಿರುದ್ಧ ಎಫ್‌ಐಆರ್

Last Updated 28 ಜನವರಿ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್‌) ‘ನಂದಿನಿ’ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರುತ್ತಿದ್ದ ಆರೋಪ ದಡಿ ನಗರದ ‘ಶ್ರುತಿ ಮಾರ್ಕೆಟಿಂಗ್ ಕಾರ್ಪೋರೇಷನ್’ ಏಜೆನ್ಸಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ನಕಲಿ ತುಪ್ಪ ಮಾರಾಟದ ಬಗ್ಗೆ ಕೆಎಂಎಫ್‌ ಅಧಿಕಾರಿಗಳು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೈಸೂರಿನ ಹೊಸಹುಂಡಿ ಗ್ರಾಮದಲ್ಲಿ ನಕಲಿ ತುಪ್ಪ ತಯಾ ರಿಕಾ ಘಟಕ ಪತ್ತೆಯಾಗಿತ್ತು. ಇಲ್ಲಿನ ತುಪ್ಪವನ್ನೇ, ನಂದಿನಿ ತುಪ್ಪ ವೆಂದು ಹೇಳಿ ಏಜೆನ್ಸಿಯವರು ಮಾರುತ್ತಿದ್ದರು. ರಾಜ್ಯ,ಹೊರ ರಾಜ್ಯಗಳಿಗೂ ನಕಲಿ ತುಪ್ಪ ಕಳುಹಿಸ ಲಾಗುತ್ತಿತ್ತು ಎನ್ನಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ವಿವಿಧೆಡೆ ದಾಳಿ: ನಕಲಿ ತುಪ್ಪ ತಯಾರಿಸುತ್ತಿದ್ದ ಮಾಹಿತಿ ಮೇರೆಗೆ ನಗರದ ಹಲವು ಕಡೆಗಳಲ್ಲಿಕೆಎಂಎಫ್‌ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದರು.

‘ತುಪ್ಪದ ಪೊಟ್ಟಣಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋ ಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT