ಫ್ಯಾಷನ್ ಲೋಕಾನೇ ಹಾಗೆ ಯಾವಾಗ ಯಾವುದು ಟಾಪ್‌ನಲ್ಲಿರುತ್ತೋ, ಯಾವುದು ಫ್ಲಾಪ್ ಆಗುತ್ತೋ ಹೇಳಲಿಕ್ಕಾಗುವುದಿಲ್ಲ. ಕಾಲ ಕಾಲಕ್ಕೆ ಫ್ಯಾಷನ್ ಜಗತ್ತಿನಲ್ಲಿ ಅಪ್‌ಡೇಟ್ ಆಗದಿದ್ದರೆ ಫ್ಯಾಷನ್ ಪ್ರೇಮಿಗಳು ಆ ಬ್ರ್ಯಾಂಡ್‌ನತ್ತ ತಿರುಗಿಯೂ ನೋಡುವುದಿಲ್ಲ.

ದೊಡ್ಡ ಕಂಪನಿಗಳಿಗೂ ಇದರ ಭಯವಿರುತ್ತದೆ. ಕೆಲವು ಬಾರಿ ರೆಟ್ರೋ ಹೆಸರಿನಲ್ಲಿ ಹಳೆಯ ಸ್ಟೈಲ್‌ನಿಂದಲೇ ಹೊಸ ಲುಕ್‌ಗೆ ಟಚ್ ನೀಡುತ್ತಾರೆ. ಇನ್ನು ಕೆಲವು ಬಾರಿ ಪರಿಚಿತವಲ್ಲದ ವಿನ್ಯಾಸವನ್ನು ಜನರ ಮುಂದಿಡುತ್ತಿವೆ ಡಿಸೈನರ್ ಬ್ರ್ಯಾಂಡ್ಸ್. ಅಂಥದಕ್ಕೆ ಅಂಟಿಕೊಳ್ಳುವವರೂ ಇದ್ದಾರೆ. ಬ್ರ್ಯಾಂಡ್ ಬಟ್ಟೆಗಳನ್ನು ಮಾತ್ರ ಬಳಸುವರಿಗೇನೂ ಕಮ್ಮಿ ಇಲ್ಲ.

ಯಾವುದೇ ಬ್ರ್ಯಾಂಡ್ ಇರಲಿ ಅದು ಟ್ರೆಂಡ್ ಸೆಟ್ಟರ್ ಆಗಿರಬೇಕು ಎನ್ನುವವರು ಕೂಡ ಇದ್ದಾರೆ. ಬ್ರ್ಯಾಂಡ್ ಹಂಗು ಇಲ್ಲದೇ ವಿಶೇಷ ವಿನ್ಯಾಸದ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಬಲ್ಲ ಟ್ರೆಂಡಿ ಬಟ್ಟೆಗಳನ್ನು ನೀಡುವ ಶಾಪ್‌ಗಳಿವೆ.
ನಗರದಲ್ಲಿ 14 ವರ್ಷಗಳಿಂದ ಬಟ್ಟೆ ಬಿಸಿನೆಸ್‌ನಲ್ಲಿ ತೊಡಗಿಕೊಂಡಿದ್ದಾರೆ ಪರ್ವೇಜ್ ಅಹ್ಮದ್. ಇದೀಗ ತಮ್ಮದೇ ಬ್ರ್ಯಾಂಡ್ ರೂಪಿಸಿಕೊಂಡಿದ್ದಾರೆ. ಬಟ್ಟೆ ಅಂಗಡಿ ಅವರ ಕುಟುಂಬದ ವ್ಯಾಪಾರವಾಗಿತ್ತು. ಬೇರೆ ಬ್ರ್ಯಾಂಡ್‌ಗಳ ಬಟ್ಟೆ ನಮಗೇಕೆ? ಒಂದು ಸ್ವಂತ ನಾನ್‌ಬ್ರ್ಯಾಂಡ್ ರೂಪಿಸಿಕೊಳ್ಳಬಾರದೇಕೆ? ಎನ್ನುವ ಆಲೋಚನೆ ಅವರಲ್ಲಿ ಮೂಡಿತು. ಆ ಕನಸಿನ ಜಾಡು ಹಿಡಿದು ಅವರು ತಲುಪಿದ್ದು ಐಎಫ್‌ಟಿಟಿ ಫ್ಯಾಷನ್ ಡಿಸೈನಿಂಗ್ ಕೋರ್ಸ್. ಅಲ್ಲಿ ಕಲಿತು ಹೊರಬಿದ್ದ ನಂತರದ್ದೆಲ್ಲವೂ ಸಾಹಸದ ಯಶೋಗಾಥೆ. ಸದ್ಯ ಇವರ ಅಂಗಡಿಯಲ್ಲಿ ಲೆಕ್ಕವಿಲ್ಲದಷ್ಟು ವೆರೈಟಿ ಬಟ್ಟೆಗಳನ್ನು ಕಾಣಬಹುದಾಗಿದೆ. ಬೆಲೆ ಕೇವಲ ₹200 ರಿಂದ ₹650ವರಗೆ ಮಾತ್ರ.

ದೆಹಲಿ, ಅಹಮದಾಬಾದ್, ಮುಂಬೈ, ಬೆಂಗಳೂರು ಮತ್ತಿತರ ನಗರಗಳಿಂದ ವಿಭಿನ್ನ ಬಟ್ಟೆಗಳನ್ನು ಖುದ್ದಾಗಿ ಕಂಡು, ಖರೀದಿಸಿ ತಮ್ಮ ಗಾರ್ಮೆಂಟ್‌ನಲ್ಲಿಯೂ ಅಂಥದೊಂದು ವಿನ್ಯಾಸ ಪ್ರಯೋಗ ಮಾಡುತ್ತಾರೆ. ಸದ್ಯ ಇವರ ಗಾರ್ಮೆಂಟ್‌ನಲ್ಲಿ 15 ಕುಶಲಕರ್ಮಿಗಳು ವಿಭಿನ್ನ ವಿನ್ಯಾಸಗಳಿಗೆ ಕೆಲಸ ಮಾಡುತ್ತಾರೆ. ಅವರ ಇಡೀ ಕುಟುಂಬವೇ ಈ ಕಾಯಕದಲ್ಲಿ ನಿರತವಾಗಿದೆ. ತಿಂಗಳಿಗೆ ಎರಡರಿಂದ ಮೂರು ಲಕ್ಷದವರೆಗೆ ದುಡಿಯುತ್ತಾರೆ. ಇದರಲ್ಲಿ ಲಾಭ 40% ಮಾತ್ರ ಎಂದು ಪರ್ವೇಜ್ ನಸುನಗುತ್ತಾರೆ.

ಪರ್ವೇಜ್ ಪ್ರಕಾರ ಇಂದಿನ ಟ್ರೆಂಡ್?

ಹೆಚ್ಚಾಗಿ ಹುಡುಗಿಯರು ಕ್ರಾಪ್ ಟಾಪ್‌ಗಳತ್ತ ವಾಲಿದ್ದಾರೆ. ಹಾಗೂ ಫ್ರಾಕ್ ಪ್ಯಾಟರ್ನ್ ಡ್ರೆಸ್‌ಗಳು ತುಂಬಾ ಜನರ ಹೃದಯ ಕದ್ದಿವೆ. ಇನ್ನು ಕ್ಯಾಪ್ ಸ್ಲೀವ್ಸ್ ಬಟ್ಟೆಗಳು ಸಹ ಜನರನ್ನು ಆಕರ್ಷಿಸುತ್ತಿವೆ. ಒಂದು ಬಾರಿ ನಮ್ಮ ಬಟ್ಟೆಯನ್ನು ಕೊಂಡವರು ಮರಳಿ ನಮ್ಮ ಶಾಪ್‌ಗೆ ಭೇಟಿ ನೀಡುವುದು ನಿಕ್ಕಿ ಎನ್ನುತ್ತಾರೆ ಪರ್ವೇಜ್.

ಅಂಗಡಿ ಎಲ್ಲಿದೆ?
ಮಹಾತ್ಮ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣದ ಪಕ್ಕಎಸ್‌ಎಸ್ ಕಲೆಕ್ಷನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.