ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು: ಎಂ.ಆರ್. ದೊರೆಸ್ವಾಮಿ

ಬೆಂಗಳೂರು: ‘ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರದ ಜೊತೆ ಕೈಜೋಡಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಪದಾಧಿಕಾರಿಗಳಿಗೆ ರಾಜ್ಯ ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್. ದೊರೆಸ್ವಾಮಿ ಮನವಿ ಮಾಡಿದರು.
ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ ಮತ್ತು ಪದಾಧಿಕಾರಿಗಳು ಹಾಗೂ ಹಿಂದಿನ ಅಧ್ಯಕ್ಷರ ಜೊತೆ ಅವರು ಸಭೆ ನಡೆಸಿದರು.
‘ರಾಜ್ಯದ 48 ಸಾವಿರಕ್ಕೂ ಹೆಚ್ಚು ಶಾಲೆಗಳ ಪೈಕಿ ಶೇ 60ರಷ್ಟು ಶಾಲೆಗಳು ಅತಿವೃಷ್ಟಿ ಹಾಗೂ ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿವೆ. ಈ ಶಾಲೆಗಳಿಗೆ ನೆರವಿನ ಅಗತ್ಯವಿದೆ. ಶಾಸಕರು, ಸಂಸದರು ಮತ್ತು ವಿಶ್ವವಿದ್ಯಾನಿಲಯಗಳು ಸುಮಾರು 1,500 ಸರ್ಕಾರಿ ಶಾಲೆಗಳನ್ನು ಅಭಿವೃಪಡಿಸಲು ದತ್ತು ಪಡೆದಿವೆ. ಇನ್ನಷ್ಟು ಶಾಲೆಗಳು ನೆರವಿನ ನಿರೀಕ್ಷೆಯಲ್ಲಿವೆ’ ಎಂದರು.
‘ಡಿಪ್ಲೊಮಾ ಮತ್ತು ಪದವಿಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಂಡುಕೊಳ್ಳಲು ಪ್ಲೇಸ್‌ಮೆಂಟ್ ಪ್ಲಾಟ್‌ಫಾರ್ಮ್ ಸ್ಥಾಪಿಸಲು ವಿಶ್ವವಿದ್ಯಾನಿಲಯಗಳ ಜೊತೆ ಎಫ್‌ಕೆಸಿಸಿಐ ಕೈಜೋಡಿಸಬೇಕು ಆಗಬೇಕು’ ಎಂದೂ ಅವರು ಹೇಳಿದರು.
ದೊರೆಸ್ವಾಮಿ ಅವರ ನಡೆಯನ್ನು ಶ್ಲಾಘಿಸಿದ ಗೋಪಾಲ್ ರೆಡ್ಡಿ, ‘ಇದೊಂದು ಉತ್ತಮ ಕ್ರಮ. ನಾವು ಸಾಧ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರಕ್ಕೆ ನೀಡುತ್ತೇವೆ’ ಎಂದು ಭರವಸೆ ನೀಡಿದರು.
ಎಫ್‌ಕೆಸಿಸಿಐ ಉಪಾಧ್ಯಕ್ಷ ಎಂ.ಜಿ.ಬಾಲಕೃಷ್ಣ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷರಾದ ಕೆ.ಎಂ. ಶ್ರೀನಿವಾಸ ಮೂರ್ತಿ, ಕೆ. ಲಕ್ಷ್ಮಣ್, ಕೆ. ರಾಮಸ್ವಾಮಿ, ಬಿ.ಎಸ್.ಅರುಣ್ ಕುಮಾರ್, ಎಸ್.ಬಾಬು, ಜೆ.ಆರ್.ಬಂಗೇರ, ಕೆ.ಶಿವಷಣ್ಮುಗಂ, ಎಫ್‌ಕೆಸಿಸಿಐ ನಿರ್ದೇಶಕ ಬಿ.ಪಿ. ಶಶಿಧರ್ ಸಭೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.