ಡಿಕೆಶಿ ಮಕ್ಕಳ ಫೋಟೊ ಬಳಕೆ: 2 ಯೂಟ್ಯೂಬ್ ಚಾನಲ್ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಕ್ಕಳ ಫೋಟೊ ಬಳಸಿಕೊಂಡು ಮಾನಹಾನಿ ವಿಡಿಯೊ ಹರಿಬಿಟ್ಟಿರುವ ಆರೋಪದಡಿ ಯೂಟ್ಯೂಬ್‌ನಲ್ಲಿರುವ ಎರಡು ಚಾನೆಲ್‌ಗಳ ವಿರುದ್ಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಡಿ. ಉಮೇಶ್ ಎಂಬುವರು ದೂರು ನೀಡಿದ್ದಾರೆ. ‘ಇಂಡಿಯಾ ರಿಪೋರ್ಟ್ಸ್’ ಹಾಗೂ ‘ಬಿ4ಯು ಕನ್ನಡ’ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ಚಾನೆಲ್‌ಗಳನ್ನು ಯಾರದ್ದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಇವರ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಯಾಕೆ?’ ಹಾಗೂ ‘ಹೂ ಇಸ್ ಆಭರಣ ಡಿ.ಕೆ. ಶಿವಕುಮಾರ್ ಕೆಪಿಸಿಸಿ’ ಶೀರ್ಷಿಕೆಯಡಿ ವಿಡಿಯೊ ಹರಿಬಿಡಲಾಗಿತ್ತು. ಶಿವಕುಮಾರ್ ಅವರ ಮಗ ಹಾಗೂ ಮಗಳ ಫೋಟೊವನ್ನು ವಿಡಿಯೊದಲ್ಲಿ ಬಳಸಲಾಗಿತ್ತು’ ಎಂದು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.