ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಪ್ರಥಮ ಬಹುಶಿಸ್ತೀಯ ಪಠ್ಯಕ್ರಮದ ಕಾಲೇಜು ಆರಂಭ

Last Updated 3 ಸೆಪ್ಟೆಂಬರ್ 2021, 22:17 IST
ಅಕ್ಷರ ಗಾತ್ರ

ಬೆಂಗಳೂರು:ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ರಾಜ್ಯದ ಮೊದಲ ಬಹುಶಿಸ್ತೀಯ ಕಲಿಕೆಯ ಮಹಿಳಾ ಪದವಿ ಕಾಲೇಜು ಶುಕ್ರವಾರದಿಂದ ಆರಂಭವಾಯಿತು.

ಕಾಲೇಜು ಉದ್ಘಾಟಿಸಿದ ಉನ್ನತ ಶಿಕ್ಷಣ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ಈ ವರ್ಷ ಪರೀಕ್ಷೆ ಇಲ್ಲದೆ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಕಾಲೇಜುಗಳ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ವಿಶ್ವವಿದ್ಯಾಲಯಗಳು ನೇರವಾಗಿ ಪದವಿ ಕಾಲೇಜು ನಡೆಸಬಾರದೇಕೇ ಎಂದು ಸರ್ಕಾರ ಚಿಂತನೆ ನಡೆಸಿತು. ಅದರ ಫಲವಾಗಿಯೇ ಈ ಹೊಸ ಕಾಲೇಜು ಆರಂಭವಾಗಿದೆ’ ಎಂದರು.

‘ಕಾಲೇಜಿಗೆ ಸರ್ಕಾರದಿಂದಲೇ ಕಟ್ಟಡ, ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಅದನ್ನು ನಿರ್ವಹಿಸಬೇಕಾದ ಹೊಣೆ ವಿಶ್ವವಿದ್ಯಾಲಯದ್ದು. ಶೀಘ್ರದಲ್ಲಿಯೇ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಯಾವ ಸಂಯೋಜನೆಗಳು ಇರಬೇಕು ಎಂಬುದನ್ನು ವಿಶ್ವವಿದ್ಯಾಲಯವೇ ತಿಳಿಸುತ್ತದೆ’ ಎಂದರು.

‘ಮಹಿಳೆಯರಿಗಾಗಿಯೇ ಮೀಸಲಾದ ಈ ಪದವಿ ಕಾಲೇಜಿನಲ್ಲಿ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ತರಗತಿಗಳನ್ನೂ ಆರಂಭ ಮಾಡ ಬಹುದು. ಅದಕ್ಕೆ ಬೇಕಾದ ಎಲ್ಲ ಸಹಕಾರ ವನ್ನು ಸರ್ಕಾರ ನೀಡುತ್ತದೆ’ ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT