ಶುಕ್ರವಾರ, ನವೆಂಬರ್ 15, 2019
22 °C

ಶೀಲವಂತನ ಕೆರೆ: ಸಾವಿರಾರು ಮೀನುಗಳ ಸಾವು

Published:
Updated:
Prajavani

ಮಹದೇವಪುರ: ಕ್ಷೇತ್ರದ ನಲ್ಲೂರುಹಳ್ಳಿ ಸಮೀಪದ ಶೀಲವಂತನ ಕೆರೆಯಲ್ಲಿ ಬುಧವಾರ ಸಾವಿರಾರು ಮೀನುಗಳು ಸತ್ತಿವೆ.

ಕೆಲ ದಿನಗಳಿಂದ ಕೆರೆಗೆ ಕಲುಷಿತ ಚರಂಡಿ ಸೇರುತ್ತಿದ್ದ ಹಿನ್ನೆಲೆಯಲ್ಲಿ ಮೀನುಗಳು ಸತ್ತಿವೆ ಎಂದು ಸ್ಥಳೀಯರು ದೂರಿದರು.
ಕೆರೆಗೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಒಳಚರಂಡಿ ನೀರು ಹಾಗೂ ರಾಸಾಯನಿಕ ನೀರು ಶುದ್ಧೀಕರಣಗೊಳ್ಳದೇ ನೇರವಾಗಿ ಕೆರೆಗೆ ಸೇರಿದೆ. ಇದರಿಂದಾಗಿ ಕೆರೆಯ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಮೀನುಗಳು ಮೃತಪಟ್ಟಿವೆ. ಈ ಬಗ್ಗೆ ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದವರು ತನಿಖೆ ನಡೆಸಬೇಕು. ಕಲುಷಿತ ನೀರನ್ನು ಹರಿಬಿಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಲ್ಲೂರುಹಳ್ಳಿ ಟಿ.ನಾಗೇಶ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)