ಬೆಂಗಳೂರಿನಲ್ಲಿ ಐದು ಹೆಣ್ಣುಮಕ್ಕಳ ಜನನ: ತಲಾ ₹5 ಲಕ್ಷ ಠೇವಣಿ ಇಡುತ್ತೆ ಬಿಬಿಎಂಪಿ

7

ಬೆಂಗಳೂರಿನಲ್ಲಿ ಐದು ಹೆಣ್ಣುಮಕ್ಕಳ ಜನನ: ತಲಾ ₹5 ಲಕ್ಷ ಠೇವಣಿ ಇಡುತ್ತೆ ಬಿಬಿಎಂಪಿ

Published:
Updated:

ಬೆಂಗಳೂರು: ಹೊಸ ವರ್ಷದ ಮೊದಲ ದಿನ ನಗರದ ವಿವಿಧೆಡೆ ಇರುವ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಒಟ್ಟು ಐದು ಹೆಣ್ಣುಮಕ್ಕಳು (ಪಿಂಕ್‌ ಬೇಬಿ) ಜನಿಸಿವೆ. ಈ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಬಿಎಂಪಿ ತಲಾ ₹ 5 ಲಕ್ಷ ಠೇವಣಿ ಇಡಲಿದೆ.

ಜ.1ರಂದು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಜನಿಸುವ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವೈದ್ಯಾಧಿಕಾರಿ ಹಾಗೂ ಮಗುವಿನ ತಾಯಿಯ ಹೆಸರಿನಲ್ಲಿ ₹ 5 ಲಕ್ಷ ಠೇವಣಿ ಇಡುವ ಯೋಜನೆಯನ್ನು ಬಿಬಿಎಂಪಿ ಕಳೆದ ಬಜೆಟ್‌ನಲ್ಲಿ ಪ್ರಕಟಿಸಿತ್ತು. ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ ₹1.20 ಕೋಟಿ ಮೀಸಲಿಟ್ಟಿತ್ತು.

ನಗರದ ತಾವರೆಕೆರೆ, ಗಂಗಾನಗರ, ನಂದಿನಿ ಲೇಔಟ್, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ,  ರಾಜಾಜಿನಗರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇಂದು ಒಟ್ಟು ಐದು ಹೆಣ್ಣುಮಕ್ಕಳು ಜನಿಸಿವೆ.

ಬರಹ ಇಷ್ಟವಾಯಿತೆ?

 • 31

  Happy
 • 6

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !