ಬೆಂಗಳೂರು: ಕಲೆಯ ಉಳಿವಿಗಾಗಿ ಚಲನಶೀಲತೆ ಇರಬೇಕು. ಸ್ಥಿರತೆ ಅಥವಾ ಸ್ಥಾಯಿಯಾಗಿದ್ದರೆ ಕಲೆ ಬೆಳೆಯುವುದು ಸಾಧ್ಯವಿಲ್ಲ. ತಾಳಮದ್ದಳೆಯನ್ನು ಬೇರೆ ಕಡೆಯೂ ಪಸರಿಸಬೇಕೆಂಬುದು ಕನಸಿಕ ಕಾರ್ಯದಲ್ಲಿ ಭಾಗವಹಿಸಲು ಹೆಮ್ಮೆಯಾಗುತ್ತಿದೆ ಎಂದು ಯಕ್ಷಗಾನ ತಾಳಮದ್ದಳೆ ರಂಗದ ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಸಂಪಾಜೆ ಹೇಳಿದರು.

ಬೆಂಗಳೂರಿನ ನಯನ ಸಭಾಂಗಣದಲ್ಲಿ ಶುಕ್ರವಾರ (ನ.29, 2024) ರಮೇಶ್ ಚೋರಾಡಿ ಸಾರಥ್ಯದ ಗೋ ಕೂಲ್ (Go- Cool) ಬಳಗ ಆಯೋಜಿಸಿದ್ದ 'ಭೃಗು ಶಾಪ' ತಾಳಮದ್ದಳೆಯ ಬಳಿಕ, ಬೆಂಗಳೂರಿನಲ್ಲಿ ಪ್ರತೀ ಯಕ್ಷಗಾನಕ್ಕೂ ಹಾಜರಾಗುವ ವಾಸುದೇವ ಐತಾಳ್ ನಾಗೂರು ಅವರಿಗೆ 'ವರ್ಷದ ಪ್ರೇಕ್ಷಕ ಪುರಸ್ಕಾರ' ನೀಡಿ ಅವರು ಮಾತನಾಡಿದರು.

ಅಜಿತ್ ಹೆಗ್ಡೆ ಶಾನಾಡಿ, ನವೀನ್ ಶೆಟ್ಟಿ ಐರ್ಬೈಲ್, ರಾಜೇಶ್ ಕೊಂಡಳ್ಳಿ, ವಿಜಯ್ ತಲ್ಲೂರು, ನಾಗರಾಜ್ ನೈಕಂಬ್ಳಿ, ಶೇಖರ್ ಕೆ.ಎಂ. ಮತ್ತು ಇತರ ಸಂಘಟಕ ಮಿತ್ರರು ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ವೇದಿಕೆಯಲ್ಲಿ ರವಿರಾಜ್ ಶೆಟ್ಟಿ, ಶ್ರೀನಿವಾಸ ರಾವ್, ಡಾ. ಜಗದೀಶ ಶೆಟ್ಟಿ, ರಾಜ್ ಸಂಪಾಜೆ ಹಾಗೂ ಇತರರಿದ್ದರು.

ಇದಕ್ಕ ಮುನ್ನ, ವಿನಯ್ ಆರ್.ಶೆಟ್ಟಿ ಭಾಗವತಿಕೆಯಲ್ಲಿ, ಸಂಪತ್ ಆಚಾರ್ಯ ಹಾಗೂ ಪನ್ನಗ ಮಯ್ಯ ಅವರ ಚೆಂಡೆ ಮದ್ದಳೆಯ ಹಿಮ್ಮೇಳದೊಂದಿಗೆ, ಡಿ.ಎಸ್.ಶ್ರೀಧರ್ ವಿರಚಿತ "ಭೃಗು ಶಾಪ" ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ದೇವೇಂದ್ರನಾಗಿ ಜಬ್ಬಾರ್ ಸಮೊ ಅರ್ಥ ಹೇಳಿದರೆ, ಅವರೊಂದಿಗೆ ಯುವ ಕಲಾವಿದರು ಗಮನ ಸೆಳೆದರು. ಖ್ಯಾತಿದೇವಿಯಾಗಿ ಸತೀಶ್ ಶೆಟ್ಟಿ ಮೂಡುಬಗೆ, ವಿಷ್ಣುವಾಗಿ ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ, ಭೃಗು ಮುನಿಯಾಗಿ ಅವಿನಾಶ್ ಶೆಟ್ಟಿ ಉಬರಡ್ಕ, ತಮಾಸುರನಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಹಾಗೂ ಬೃಹಸ್ಪತಿಯಾಗಿ ನಾಗರಾಜ ಶೆಟ್ಟಿ ನೈಕಂಬ್ಳಿ ಅರ್ಥ ಪ್ರಸ್ತುತಿಗೈದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.