ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಬೆಂಗಳೂರು ಸೂಕ್ಷ್ಮ ಪ್ರದೇಶಗಳ ಸಂಖ್ಯೆ 209ಕ್ಕೆ ಇಳಿಕೆ

ಮಳೆಗಾಲದ ಸಿದ್ಧತೆ ಪರಿಶೀಲಿಸಿದ ಕಂದಾಯ ಸಚಿವ
Last Updated 9 ಆಗಸ್ಟ್ 2021, 15:22 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದ್ದ 500ಕ್ಕೂ ಅಧಿಕ ಪ್ರದೇಶಗಳಿದ್ದವು. ಅವುಗಳ ಸಂಖ್ಯೆ ಈಗ 209ಕ್ಕೆ ಇಳಿದಿದೆ. 58 ಅತಿಸೂಕ್ಷ್ಮ ಪ್ರದೇಶಗಳನ್ನು ಹಾಗೂ 151 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅನಾಹುತ ತಡೆಯಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಮಳೆಗಾಲದಲ್ಲಿ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಬಿಬಿಎಂಪಿ ಕೈಗೊಂಡಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲು ಅವರು ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರ ಅವರು, ‘ಮಳೆಗಾಲದಲ್ಲಿ ಕೆಲವೆಡೆ ರಸ್ತೆಗಳಲ್ಲೇ ನೀರು ನಿಲ್ಲುತ್ತಿದ್ದು, ಇಂತಹ ಕಡೆ ಚರಂಡಿ ನಿರ್ಮಿಸುವಂತೆ, ಚರಂಡಿಗಳಲ್ಲಿ ಸಿಲುಕಿರುವ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸುವಂತೆ ಹಾಗೂ ರಾಜಕಾಲುವೆಗಳ ಹೂಳನ್ನು ತೆರವುಗೊಳಿಸುವಂತೆ ಸೂಚಿಸಿದ್ದೇನೆ’ ಎಂದರು.

‘ಮಳೆಗಾಲದಲ್ಲಿ ಅಹವಾಲು ಸ್ವೀಕರಿಸಲು9 ಶಾಶ್ವತ ನಿಯಂತ್ರಣ ಕೊಠಡಿಗಳು ಸೇರಿದಂತೆ ಒಟ್ಟು 63 ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ವಹಣೆಗಾಗಿಯೇ ₹ 5 ಕೋಟಿ ಅನುದಾನ ಒದಗಿಸಲಾಗಿದೆ. ಸಮಸ್ಯೆ ಎದುರಾದರೆ ತುರ್ತು ಸ್ಪಂದನೆಗಾಗಿ ತಂಡಗಳು ಸಜ್ಜಾಗಿವೆ.ಒಣಗಿರುವ ಮರಗಳನ್ನು ಹಾಗೂ ಒಣ ಕೊಂಬೆಗಳನ್ನು ಕೂಡಲೆ ತೆರವುಗೊಳಿಸಬೇಕು. ಬಿದ್ದ ಮರಗಳನ್ನು ತೆರವು ಮಾಡಲು ವಿಶೇಷ ತಂಡಗಳನ್ನು ನಿಯೋಜಿಸುವಂತೆ ನಿರ್ದೇಶನ ನೀಡಿದ್ದೇನೆ’ ಎಂದರು.

–0–

ಪ್ರವಾಹ ಉಂಟಾಗುವ ಪ್ರದೇಶಗಳ ವಿವರ

ವಲಯ; ಅತಿಸೂಕ್ಷ್ಮ ಪ್ರದೇಶ; ಸೂಕ್ಷ್ಮ ಪ್ರದೇಶ

ದಕ್ಷಿಣ; 5; 15

ಪೂರ್ವ; 5; 33

ಪಶ್ಚಿಮ; 3; 7

ಮಹದೇವಪುರ; 10; 19

ಬೊಮ್ಮನಹಳ್ಳಿ; 4; 7

ಆರ್‌.ಆರ್‌.ನಗರ; 11; 21

ಯಲಹಂಕ; 12; 7

ದಾಸರಹಳ್ಳಿ; 8; 29

ಕೇಂದ್ರ ಕಚೇರಿ ವ್ಯಾಪ್ತಿ; 13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT