ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಂಸ್ಥೆಗಳಿಂದ ಪಾದಚಾರಿ ಮಾರ್ಗ ಅಭಿವೃದ್ಧಿ: BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್‌

Published : 7 ಜೂನ್ 2025, 23:30 IST
Last Updated : 7 ಜೂನ್ 2025, 23:30 IST
ಫಾಲೋ ಮಾಡಿ
Comments
ಸಮರ್ಪಿತ ತಂಡ
ರಸ್ತೆ, ಪಾದಚಾರಿ ಮಾರ್ಗಗಳನ್ನು ನಿರ್ವಹಣೆ ಮಾಡಲು ‘ಸಮರ್ಪಿತ’ ತಂಡ ರಚಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಸೂಚಿಸಿದರು. ಬಿಬಿಎಂಪಿಯಲ್ಲಿನ ವಿವಿಧ ಇಲಾಖೆಗಳಾದ ರಸ್ತೆ ಮೂಲಸೌಕರ್ಯ ವಿಭಾಗ ಸಂಚಾರ ಎಂಜಿನಿಯರಿಂಗ್ ಘಟಕ ಓಎಫ್‌ಸಿ ಮತ್ತು ವಿದ್ಯುತ್ ವಿಭಾಗಗಳು ಒಟ್ಟಾರೆ ‘ಸಮಗ್ರ ಸಂಚಾರಿ ಇಲಾಖೆ’ಯಾಗಿ ಏಕೀಕರಿಸಬೇಕು. ಈ ವಿಭಾಗಕ್ಕೆ ಸ್ವಂತ ಸಾರಿಗೆ ಯೋಜಕರು ಮತ್ತು ನಗರ ವಿನ್ಯಾಸಕಾರರನ್ನು ನೇಮಿಸಿಕೊಂಡು ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ನಿರ್ವಹಣೆಗೆ ‘ಸಮರ್ಪಿತ ತಂಡ’ ರಚಿಸಬೇಕು ಎಂದರು. ವಸತಿ ಪ್ರದೇಶಗಳಲ್ಲಿ ಕನಿಷ್ಠ 1.8 ಮೀಟರ್ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ 2.5 ಮೀಟರ್‌ ವಿಸ್ತೀರ್ಣದ ಪಾದಚಾರಿ ಮಾರ್ಗ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT