ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಂರಕ್ಷಣೆ: ಪ್ರಶಸ್ತಿ ಪ್ರದಾನ

Last Updated 21 ಡಿಸೆಂಬರ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಅರಣ್ಯ ನೌಕರರಿಗೆ ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ ವತಿಯಿಂದ ನೀಡಲಾಗುವ 2019ನೇ ಸಾಲಿನ ಪ್ರಶಸ್ತಿಗಳನ್ನು ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಶನಿವಾರ ವಿತರಿಸಿದರು.

ಪ್ರಶಸ್ತಿಗೆ ಭಾಜನರಾದವರು: ಜಿ.ಸಂತೋಷ್‌– ಕೆನರಾ ವೃತ್ತ ಹಳಿಯಾಳ ವಿಭಾಗದ ಉಪ ವಲಯ ಅರಣ್ಯಾಧಿಕಾರಿ. ಹಜರತ್‌ ಸಾಬ ಗೌಸಖಾನ ಕುಂದಗೋಳ–ಕೆನರಾ ವೃತ್ತ ಕಾರವಾರ ವಿಭಾಗದ ಉಪ ವಲಯ ಅರಣ್ಯಾಧಿಕಾರಿ. ಎಸ್‌.ಜೆ.ನವೀನ ಕುಮಾರ–ಬೆಂಗಳೂರು ವೃತ್ತ, ಬೆಂಗಳೂರು ನಗರದ ಉಪ ವಲಯ ಅರಣ್ಯಾಧಿಕಾರಿ. ಪಿ.ಟಿ. ಶಶಿ–ಕೊಡಗು ವೃತ್ತದ ಮಡಿಕೇರಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ. ಚರಣಕುಮಾರ್–ಸಕಲೇಶಪುರ ಸಂಶೋಧನಾ ಘಟಕದ ಉಪ ವಲಯ ಅರಣ್ಯಾಧಿಕಾರಿ. ಸೋಮಶೇಖರ ಜಿ.ಪಾವಟೆ–ಬೆಳಗಾವಿ ವೃತ್ತದ ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ. ಯು.ಷಣ್ಮುಖ
–ಚಿಕ್ಕಮಗಳೂರು ವೃತ್ತದ ಭದ್ರಾವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ. ಎಚ್.ಎ.ನಯನ
ಕುಮಾರಿ–ಕೆನರಾ ವೃತ್ತದ ಹೊನ್ನಾವರ ವಿಭಾಗದ ಅರಣ್ಯ ರಕ್ಷಕಿ. ಎಂ.ಡಿ.ಅಯ್ಯಪ್ಪ–ಮೈಸೂರು ವೃತ್ತದ ಮೈಸೂರು ವನ್ಯಜೀವಿ ವಿಭಾಗದ ಅರಣ್ಯ ರಕ್ಷಕ. ಕೆ.ಶರತ್‌ ಶೆಟ್ಟಿ–ಮಂಗಳೂರು ವೃತ್ತದ ಮಂಗಳೂರು ವಿಭಾಗದ ಅರಣ್ಯ ರಕ್ಷಕ. ಚೌಡಪ್ಪ ನಾಯ್ಕ ವಿ.ಜಿಡ್ಡಿಮನಿ–ಕೊಡಗು ವೃತ್ತದ ವಿರಾಜಪೇಟೆಯ ಅರಣ್ಯ ರಕ್ಷಕ. ಅಬ್ದುಲ್‌ ಮುಜೀಬ್‌–ಚಾಮರಾಜನಗರ ವೃತ್ತದ ಕೊಳ್ಳೇಗಾಲ ವಿಭಾಗದ ಅರಣ್ಯ ರಕ್ಷಕ. ಪಾಪಣ್ಣ ಸಣ್ಣಬೋರಯ್ಯ–ಬಳ್ಳಾರಿ ವೃತ್ತದ ಬಳ್ಳಾರಿ ವಿಭಾಗದ ಅರಣ್ಯ ವೀಕ್ಷಕ. ಸಂಜೀವ ಮಾರುತಿ ಅಸ್ನೋಟಿಕರ–ಕೆನರಾ ವೃತ್ತದ ಕಾರವಾರ ವಿಭಾಗದ ಅರಣ್ಯ ವೀಕ್ಷಕ. ಜಟ್ಟಿ ತಿಪ್ಪಯ್ಯ ನಾಯ್ಕ–ಕೆನರಾ ವೃತ್ತದ ಹೊನ್ನಾವರ ವಿಭಾಗದ ಕ್ಷೇಮಾಭಿವೃದ್ಧಿ ಕಾವಲುಗಾರ. ಮಹದೇವ ಎಂ.ಮಡ್ಡಿ–ಕೆನರಾ ವೃತ್ತದ ಹೊನ್ನಾವರ ವಿಭಾಗದ ಮಂಕಿ ವಲಯದ ಉಪ ವಲಯ ಅರಣ್ಯಾಧಿಕಾರಿ.

ಬಿ.ಮಾರಪ್ಪ ಸ್ಮಾರಕ ಟ್ರಸ್ಟ್‌ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಸಿ.ಸಿ.ಪಾಟೀಲ, ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ಅರಣ್ಯ ಪಡೆ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಸಂಜಯ ಮೋಹನ್‌, ಅಭಿವೃದ್ಧಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ ಮಿಶ್ರಾ, ಮಾರಪ್ಪ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ನಿವೃತ್ತ ಐಎಎಸ್‌ ಅಧಿಕಾರಿ ಆರ್‌.ಎಂ.ಪಾಲಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT