ಬೆಂಗಳೂರು: ಕೃತಕ ಬುದ್ಧಿಮತ್ತೆ (ಎ.ಐ) ಸೇರಿದಂತೆ ಯಾವುದೇ ತಂತ್ರಜ್ಞಾನ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸಬೇಕೇ ವಿನಾ ಅಳಿಸಿ ಹಾಕಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಬೆಂಗಳೂರು ಜಿಎಎಫ್ಎಕ್ಸ್–2026 ಗೇಮ್ಸ್, ಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ ಸಮ್ಮೇಳನದ 7ನೇ ಆವೃತ್ತಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಐ ಬಗ್ಗೆ ಮಾತನಾಡದೆ ಯಾವ ಚರ್ಚೆಯೂ ಮುಗಿಯುವುದಿಲ್ಲ. ಕಥೆ, ಸಿನಿಮಾ, ಗೇಮ್ ಎಲ್ಲವನ್ನೂ ಎಐ ಬದಲಾಯಿಸುತ್ತಿದೆ. ಅನಿಮೇಷನ್ನಿಂದ ಹಿಡಿದು ಧ್ವನಿ ನಿರ್ಮಾಣದವರೆಗಿನ ಕೆಲಸವನ್ನು ಎ.ಐ ಸುಲಭ ಮಾಡಿದೆ. ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಆದರೆ, ಎ.ಐ ಕೇವಲ ಒಂದು ಸಾಧನ. ಅದು ಮನುಷ್ಯನ ಕಲ್ಪನೆಗೆ ಮೀರಿದ್ದಲ್ಲ. ಮನುಷ್ಯನ ಭಾವನೆಗಳನ್ನು ಅನುಕರಿಸಲು ಕೂಡ ಆಗದು. ಕೃತಕಬುದ್ಧಿಮತ್ತೆ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು’ ಎಂದು ವಿಶ್ಲೇಷಿಸಿದರು.

‘ಬೌದ್ಧಿಕ ಆಸ್ತಿಯ ಹಕ್ಕುಗಳು, ದತ್ತಾಂಶದ ಗೋಪ್ಯತೆ, ಕೆಲಸಕ್ಕೆ ನ್ಯಾಯಯುತ ಸಂಭಾವನೆ, ಹೊಸ ಕೌಶಲ ಕಲಿಯಲು ಅವಕಾಶಗಳ ಬಗ್ಗೆ ನಾವು ಯಾವಾಗಲೂ ಗಮನಹರಿಸಬೇಕು. ಅನಿಮೇಷನ್ ಮತ್ತು ಗೇಮಿಂಗ್ಗಳಲ್ಲಿ ಹೊಸ ಪ್ರಯೋಗಗಳನ್ನು ಬೆಂಬಲಿಸುತ್ತೇವೆ. ಆದರೆ, ಜವಾಬ್ದಾರಿಯನ್ನು ಮರೆತು ಹಿಂಸೆಯನ್ನು ತೋರಿಸುವುದು, ವೈಭವೀಕರಿಸುವುದು ಮಾಡಬಾರದು. ಮಕ್ಕಳ ಮನಸ್ಸಿಗೆ ಚಿಂತೆ ಹಚ್ಚಬಾರದು. ಸೃಜನಶೀಲ, ವಿಮರ್ಶಾತ್ಮಕ ಯೋಚನೆ, ಒಳ್ಳೆಯ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಆಟಗಳಿಗಷ್ಟೇ ಪ್ರೋತ್ಸಾಹ ನೀಡಲಾಗುವುದು’ ಎಂದು ತಿಳಿಸಿದರು.

'ನಾವು ಪ್ರಸ್ತುತ 2024–2029 ಅವಧಿಗೆ ಸಂಬಂಧಿಸಿದ ಮೂರನೇ ಎವಿಜಿಸಿ–ಎಕ್ಸ್ಆರ್ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಗೇಮ್ಸ್, ಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ ಕ್ಷೇತ್ರವು ಸಣ್ಣಮಟ್ಟದ ಸೃಜನಾತ್ಮಕ ಉದ್ಯಮವಾಗಿ ಉಳಿದಿಲ್ಲ. ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಸ್ಟ್ರೀಮಿಂಗ್ ವೇದಿಕೆಗಳು, ಇ-ಸ್ಪೋರ್ಟ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ, ಇಂದು ಮಾನವನ ಕಥೆ, ಸಂಸ್ಕೃತಿ, ಶಿಕ್ಷಣ ಮತ್ತು ಆಡಳಿತದ ಅನುಭವಗಳನ್ನು ಜಿಎಎಫ್ಎಕ್ಸ್ ರೂಪಿಸುತ್ತಿದೆ’ ಎಂದರು.

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ 875 ಜಿಸಿಸಿ: ಡಿಕೆಶಿ

‘ಸಂಶೋಧನೆ ನೂತನ ಆವಿಷ್ಕಾರಗಳಿಗೆ ಉದ್ಯೋಗಗಳಿಗೆ ಹಾಗೂ ಪ್ರತಿಭಾವಂತರಿಗೆ ಕರ್ನಾಟಕವು ಕಾಯಕ ಭೂಮಿಯಾಗಿದೆ. ರಾಜ್ಯವು 875ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಡಿಜಿಟಲ್ ಮಾಧ್ಯಮ ಕಂಪನಿಗಳಿಗೆ ನೆಲೆಯಾಗಿ ರೂಪುಗೊಂಡಿದೆ. ರಾಜ್ಯದಲ್ಲಿ 6.50 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಎಐ ಕೌಶಲಗಳ ಕುರಿತು ತರಬೇತಿ ನೀಡಲಾಗುತ್ತಿದೆ’ ಎಂದರು. ‘ಅನಿಮೇಷನ್ ವಿಶುವಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ - ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಈ ವಲಯ ವಾರ್ಷಿಕವಾಗಿ ಶೇ 25ರಿಂದ ಶೇ 30ರಷ್ಟು ಬೆಳೆಯುತ್ತಿದೆ. ಮುಂಬರುವ ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.