ಶನಿವಾರ, ಮಾರ್ಚ್ 25, 2023
27 °C

‘ಗಗನಯಾನ’ಕ್ಕೆ ಎಚ್‌ಎಎಲ್‌ ಯಂತ್ರಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಸ್ರೊ ಕೈಗೊಳ್ಳಲಿರುವ ಮಾನವ ಸಹಿತ ‘ಗಗನಯಾನ’ಕ್ಕಾಗಿ ಎಚ್ಎಎಲ್‌ ಇಸ್ರೊಗೆ ಯಂತ್ರಾಂಶವನ್ನು (ಹಾರ್ಡ್‌ವೇರ್) ಸೋಮವಾರ ಹಸ್ತಾಂತರಿಸಿದೆ.

ಎಚ್‌ಎಎಲ್‌ನಲ್ಲಿ ಪಿಎಸ್‌2/ ಜಿಎಸ್‌2 ಹಂತಗಳ ಸಂಯೋಜನೆ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೊದಲ ಸೆಟ್‌ನ ಯಂತ್ರಾಂಶವನ್ನು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್ ಸ್ವೀಕರಿಸಿದರು. ಅಲ್ಲದೆ, 150 ಸ್ಯಾಟಿಲೈಟ್‌ ಬಸ್ಟ್‌ ಶೆಲ್ಟರ್‌ಗಳನ್ನೂ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮನಾಥ್‌, ಭಾರತದ ಮಾನವ ಸಹಿತ ಗಗನಯಾನ ಮತ್ತು ಇತರ ಬಾಹ್ಯಾಕಾಶ ಯೋಜನೆಗಳಲ್ಲಿ ಎಚ್‌ಎಎಲ್‌ ಮಹತ್ವದ ಪಾತ್ರವಹಿಸಲಿದೆ. ಇದಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಕಂಪೆನಿ ಹೊಂದಿದೆ ಎಂದು ಅವರು ಹೇಳಿದರು.

ಬಾಹ್ಯಾಕಾಶ ಯೋಜನೆಗಳಲ್ಲಿ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವುದು ಮತ್ತು ಕಡಿಮೆ ಬೆಲೆಯಲ್ಲಿ ಉತ್ಪಾದಿಸುವುದು ಸವಾಲಿನ ವಿಷಯವಾಗಿದೆ. ಇದರಲ್ಲಿ ಎಚ್‌ಎಎಲ್‌ ಮತ್ತು ಖಾಸಗಿ ಕಂಪನಿಗಳ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು.

ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ಅವರು, ಇಸ್ರೊ ಜತೆಗೆ 40 ವರ್ಷಗಳ ಸಹಯೋಗವಿದ್ದು, ಹಲವು ಬಾಹ್ಯಾಕಾಶ ಯೋಜನೆಗಳಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು