ಶುಕ್ರವಾರ, ಅಕ್ಟೋಬರ್ 23, 2020
21 °C
* ಜೆ.ಪಿ. ನಗರ ಪೊಲೀಸರ ಕಾರ್ಯಾಚರಣೆ * ಅತಿಥಿ ಶಿಕ್ಷಕ ಸೇರಿ ಮೂವರ ಬಂಧನ

₹ 76 ಲಕ್ಷ ಮೌಲ್ಯದ 127 ಕೆ.ಜಿ ಗಾಂಜಾ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೀದರ್‌ನಿಂದ ನಗರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 76 ಲಕ್ಷ ಮೌಲ್ಯದ 127 ಕೆ.ಜಿ ಗಾಂಜಾವನ್ನು ಜೆ.ಪಿ.ನಗರ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಸರ್ಜಾಪುರ ಬಳಿಯ ಬಿಲ್ಲಾಪುರ ಗ್ರಾಮದ ಅಸ್ಗರ್ ಖಾನ್ (24), ತೆಲಂಗಾಣದ ಜಿ. ಕಿರಣ್ (22) ಹಾಗೂ ಪಿ. ಮಹಿಪಾಲ್ (22) ಬಂಧಿತರು. ಗಾಂಜಾ ಜೊತೆಯಲ್ಲಿ 2 ಮೊಬೈಲ್ ಹಾಗೂ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಗರ್, ಮಾದಕ ವ್ಯಸನಿ. ಆರೋಪಿ ಕಿರಣ್, ತನ್ನೂರಿನ ಐಟಿಐ ಕಾಲೇಜೊಂದರಲ್ಲಿ ಅತಿಥಿ ಶಿಕ್ಷಕ. ಮಹಿಪಾಲ್ ಬಿ.ಎ ಪದವೀಧರ.’

‘ಲಾಕ್‌ಡೌನ್‌ನಿಂದಾಗಿ ಮೂವರ ಕೆಲಸ ಹೋಗಿತ್ತು. ಕುಟುಂಬ ನಿರ್ವಹಣೆಯೂ ಕಷ್ಟವಾಗಿತ್ತು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಅವರು ಗಾಂಜಾ ಮಾರಾಟ ಮಾಡಲಾರಂಭಿಸಿದ್ದ. ಬೀದರ್‌ನಲ್ಲಿ ಖರೀದಿಸುತ್ತಿದ್ದ ಗಾಂಜಾವನ್ನು ಕಾರಿನಲ್ಲಿ ನಗರಕ್ಕೆ ತಂದು ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ಹೇಳಿದರು.

‘ಕಿರಣ್ ಹಾಗೂ ಮಹಿಪಾಲ್ ಇಬ್ಬರೂ ಸಂಬಂಧಿಕರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಅಸ್ಗರ್ ಖಾನ್ ಪರಿಚಯ ಆಗಿತ್ತು. ನಂತರ ಮೂವರು ಸೇರಿಕೊಂಡು ಬಾಡಿಗೆ ಕಾರು ಪಡೆದು ಬೀದರ್‌ಗೆ ಹೋಗಿ ಗಾಂಜಾ ತರುತ್ತಿದ್ದರು. ಮಾರ್ಗಮಧ್ಯೆ ಉಪ ಪೆಡ್ಲರ್‌ಗಳಿಗೆ ಗಾಂಜಾ ಮಾರುತ್ತಿದ್ದರು’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು