ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಪರಂಪರಾಗತ (ಲೆಗಸಿ) ಜಾಹೀರಾತುಗಳಿಗೆ ಅನುಮತಿ ನೀಡಲು ಒಂದು ಬಾರಿ ಅವಕಾಶ (ಒಟಿಒ) ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025 ರಲ್ಲಿ ಲೆಗಸಿ ಜಾಹೀರಾತು ಹಾಗೂ ಎಲ್.ಇ.ಡಿ ಸ್ವಯಂ ಜಾಹೀರಾತು ಫಲಕಗಳನ್ನು ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸಲು ‘ಒಟಿಒ’ ಕಲ್ಪಿಸಲಾಗಿದೆ.

‘ಒಟಿಒ’ ಅನ್ನು ಕೇಂದ್ರೀಕೃತವಾಗಿ ಮೇಲ್ವಿಚಾರಣೆ ನಡೆಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಕರೀಗೌಡ ಅವರನ್ನು, ನೋಡಲ್ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ.

ಬಿಬಿಎಂಪಿ ಜಾಹೀರಾತು ಉಪವಿಧಿಗಳು-2006 ಅಡಿಯಲ್ಲಿ ಖಾಸಗಿ ಆಸ್ತಿಯ ಮೇಲೆ ಜಾಹೀರಾತು ಅಳವಡಿಸಲು ಅನುಮತಿ ಪಡೆದಿರುವ ಹಾಗೂ ಸಂಪೂರ್ಣ ಜಾಹೀರಾತು ತೆರಿಗೆ ಪಾವತಿಸಿರುವ ಜಾಹೀರಾತು ಸಂಸ್ಥೆಗಳನ್ನು ಪರಂಪರಾಗತ (ಲೆಗಸಿ) ಜಾಹೀರಾತು ಸಂಸ್ಥೆಗಳೆಂದು ಪರಿಗಣಿಸಲಾಗಿರುತ್ತದೆ. ಯಾವುದೇ ಹಿಂದಿನ ಜಾಹೀರಾತು ಉಪವಿಧಿಗಳ ಅಡಿಯಲ್ಲಿ ಎಲ್.ಇ.ಡಿ ಜಾಹೀರಾತು ಪ್ರದರ್ಶನ ಫಲಕಕ್ಕಾಗಿ ಪಡೆಯಲಾದ ಮತ್ತು ಚಾಲ್ತಿಯಲ್ಲಿರುವ ಹಾಗೂ ಅನುಮತಿ ಅವಧಿಯೊಳಗೆ ಎಲ್.ಇ.ಡಿ ಸ್ವಯಂ ಜಾಹೀರಾತುಗಳನ್ನು ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಅರ್ಹ ಜಾಹೀರಾತುದಾರರು ಏಪ್ರಿಲ್ 13ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜಾಹೀರಾತು ವಿಭಾಗ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.