ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯು ರಜತ ಮಹೋತ್ಸವವನ್ನು ಭಾನುವಾರ ಅದ್ದೂರಿಯಾ ಆಚರಿಸಿತು.

ತಿರುಚಿ ಮಹಾಸ್ವಾಮೀಜಿಯವರ ಪರಮಾನು ಗ್ರಹದಿಂದ ಪ್ರಾರಂಭವಾದ ಈ ಶಾಲೆಯು ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಮೌಲ್ಯಧಾರಿತ ಶಿಕ್ಷಣವನ್ನು ಯಾವುದೇ ರೀತಿಯ ಭೇದಭಾವವಿಲ್ಲದೆ ಸರ್ವರಿಗೂ ಶಿಕ್ಷಣ ಎಂಬ ಧ್ಯೇಯದೊಂದಿಗೆ ನೀಡುತ್ತ ಬಂದಿದೆ ಎಂದು ಸಮಾರಂಭದಲ್ಲಿದ್ದ ಎಲ್ಲಾ ಗಣ್ಯರು ಸಂವಾದ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕ ರಾಜ್ಯದ ಮಹಿಳಾ ಅಯೋಗ್ಯದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿಯವರು ಮಕ್ಕಳು ತಾವು ಅಂದುಕೊಂಡಿದ್ದನ್ನು ಸಾಧಿಸಲು ಶ್ರದ್ಧೆ ಮತ್ತು ಶ್ರಮ ವಹಿಸಬೇಕು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು ಇಲ್ಲದಿದ್ದರೂ ರಾಜಕೀಯವನ್ನು ಚೆನ್ನಾಗಿ ಅರಿಯಬೇಕು ಎಂದು ಹೇಳಿದರು.

ಇಸ್ರೋ ಉಪನಿರ್ದೇಶಕ ಡಾ. ವೆಂಕಟೇಶ್ವರ ಶರ್ಮರವರು ವಿಜ್ಞಾನ ಮತ್ತು ಆಧ್ಯಾತ್ಮ ಎರಡು ಜೊತೆ ಜೊತೆಯಲ್ಲಿ ಸಾಗಬೇಕು ವಿದ್ಯಾರ್ಥಿಗಳ ಕೈಯಲ್ಲಿ ಒಂದು ಮಿನಿ ಸ್ಯಾಟಲೈಟ್ ಮಾಡಿಸುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಲೇಖಕ ಶಾಂತನು ಗುಪ್ತ ಅವರು ಮಾತನಾಡುತ್ತಾ ನಮ್ಮ ಜೀವನದಲ್ಲಿ ಏನಾದರೂ ಕಷ್ಟಗಳು ಬಂದಾಗ ಶ್ರೀರಾಮನ ಜೀವನವನ್ನು ನೆನಪಿಸಿಕೊಳ್ಳಿ ಕಷ್ಟಗಳನ್ನು ಸಹಿಸುವ ಶಕ್ತಿ ಬರುತ್ತದೆ ಎಂದರು.

ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರು ಮಾತನಾಡುತ್ತಾ ತಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಮುನ್ನ ದೈಹಿಕ ಬಲ, ಬುದ್ಧಿಬಲ ಹಾಗೂ ಭಾವನಾತ್ಮಕ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಹರಿಹರ ಪುರ ಮಹಾಸ್ವಾಮೀಜಿಯವರು ತಂತ್ರಜ್ಞಾನವು ನಮ್ಮ ಲೌಕಿಕ ಸವಲತ್ತುಗಳಿಗೆ ಅನುಕೂಲ ಮಾಡಿಕೊಡಬಹುದೇ ಹೊರತು ಆತ್ಮ ಶಕ್ತಿ ಜಾಗೃತಿಗಲ್ಲ. ಆದ್ದರಿಂದ ನಮ್ಮ ಆಚಾರ ವಿಚಾರಗಳ ಬಗ್ಗೆ ಎಂದೂ ಉದಾಸೀನ ಮಾಡಬೇಡಿ ಎಂದರು.

ಜಯೇಂದ್ರ ಪುರಿ ಮಹಾ ಸ್ವಾಮೀಜಿಯವರು ಮಾತನಾಡುತ್ತಾ ನಾವು ಕಲಿಯುವ ವಿದ್ಯೆ ಸಮಾಜದ ಒಳಿತಿಗಾಗಿ ಇರಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರತಿದಿನ ಒಂದು ಗಂಟೆಯನ್ನು ಮೀಸಲಿಡಬೇಕು ಎಂದು ಜಾಗೃತಿ ಮೂಡಿಸಿದರು.

ಶಾಲೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಹಯಗ್ರೀವ ಆಚಾರ್ಯ ಅವರಿಗೆ ಎಲ್ಲಾ ಗುರು ಹಿರಿಯರ ಸಮ್ಮುಖದಲ್ಲಿ ಸರ್ವಸಂತ ಪ್ರಿಯ ಸೇವಾ ಸೇನಾಧಿಪತಿ ಎಂಬ ಬಿರುದನ್ನು ನೀಡಿ ಗೌರವಿಸಿದರು.

ಸುಮಾರು 7000ಕ್ಕೂ ಹೆಚ್ಚು ಪೋಷಕರು ಭಾಗವಹಿಸಿದ ಈ ಬೃಹತ್ ಕಾರ್ಯಕ್ರಮದಲ್ಲಿ ಸೃಷ್ಟಿಯ ಮೂಲದಿಂದ ಆಧುನಿಕ ಭಾರತದವರೆಗೆ ಸನಾತನ ಕಥೆಗಳನ್ನು ಒಳಗೊಂಡ ಆದಿ ಅನಂತ ಮಾಯೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.