ಬೆಂಗಳೂರು: ಇಲ್ಲಿನ ಗೀತಂ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ ಮತ್ತು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ನಾಗರಹೊಳೆಯಲ್ಲಿ ಜೇನು ಕುರುಬರಿಗೆ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ ವಿತರಿಸಲಾಯಿತು.

ಸಮಾನತೆ, ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ (ಸೀಡ್) ಯೋಜನೆಯಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೀತಂ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಐ.ಜೀನಾ ಜೇಕಬ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹ ಸಂಶೋಧಕರಾದ ಕೆ.ಗೀತಾ, ಟಿ.ಪ್ರಸನ್ನ ವೆಂಕಟೇಶನ್, ಎ. ವಿಶ್ವಭಾರತಿ, ಸುಜಿತ್ ಬಸಕ್, ಡಿ.ನಿರ್ಮಲಾ ದೇವಿ, ಯೋಜನೆ ಮಾರ್ಗದರ್ಶಕರಾದ ವಂಶೀಧರ್ ಯಂಡಪಲ್ಲಿ, ಸಂಶೋಧನಾ ಸಮಿತಿ ಅಧ್ಯಕ್ಷ ಕೆ.ಜಿ. ಮೋಹನ್, ರಾಮಕೃಷ್ಣ ಉಪಸ್ಥಿತರಿದ್ದರು.

ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಜೇನುಕೃಷಿ ತಜ್ಞ ಕೆ.ಟಿ. ವಿಜಯಕುಮಾರ್ ಮತ್ತು ತಂಡದ ಸದಸ್ಯರು ಜೇನುಗೂಡು ನಿರ್ವಹಣೆ, ರೋಗ ನಿಯಂತ್ರಣ, ಜೇನು ಸಂಗ್ರಹಣೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ತರಬೇತಿ ನಡೆಸಿಕೊಟ್ಟರು.

ಜೇನು ಕುರುಬ ಸಮುದಾಯದ ಜೀವನಮಟ್ಟ ಸುಧಾರಣೆ, ವೈಜ್ಞಾನಿಕ ವಿಧಾನಗಳ ಮೂಲಕ ಜೇನುಸಾಕಾಣಿಕೆ ಮಾಡುವ ಮೂಲಕ ಆದಾಯ ಹೆಚ್ಚಳ, ತರಬೇತಿ ಮೂಲಕ ಫಲಾನುಭವಿಗಳಿಗೆ ಆಧುನಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.