ದೊಡ್ಡಬಳ್ಳಾಪುರ: ಗೀತಂ ವಿಶ್ವವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಮಾರ್ಚ್ 2 ರಿಂದ 10ರವರೆಗೆ ಸಾಮಾಜಿಕ ಅರಿವು ಆಂದೋಲನ ಆಯೋಜಿಸಲಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಗೀತಂ ವಿಶ್ವವಿದ್ಯಾಲಯದ ಶಿವಾಜಿ ಭವನ ಸಭಾಂಗಣದಲ್ಲಿ ಮಾರ್ಚ್ 2ರಂದು ಬೆಳಗ್ಗೆ 11.30ಕ್ಕೆ ಆಂದೋಲನಕ್ಕೆ ಚಾಲನೆ ಸಿಗಲಿದ್ದು, ಸೈಬರ್ ಕ್ರೈಂ, ರಸ್ತೆ ಸುರಕ್ಷತೆ, ಡ್ರಗ್ಸ್ ಮುಕ್ತ ಸಮಾಜ ಸೇರಿದಂತೆ ನಾನಾ ವಿಷಯಗಳ ಜಾಗೃತಿ ಕುರಿತು ಸರಣಿ ಕಾರ್ಯಕ್ರಮಗಳು ನಡೆಯಲಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್, ಡಿಎಸ್ಪಿ ಪಾಂಡುರಂಗ, ಸೈಬರ್ ಅಪರಾಧ ತಡೆ ವಿಭಾಗದ ಇನ್ಸ್ಪೆಕ್ಟರ್ಗಳಾದ ದೇವಿಕಾದೇವಿ, ಪ್ರವೀಣ್ಕುಮಾರ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಬಳಿಕ ಹೆಲ್ಮೆಟ್ ವಿತರಣೆ ನಡೆಯಲಿದೆ. ಮಾರ್ಚ್ 3ರಂದು ಮಾದಕವಸ್ತು ದುಷ್ಪರಿಣಾಮ ಜಾಗೃತಿ ರ್ಯಾಲಿ, ಪೌಷ್ಟಿಕ ಆಹಾರ ಸೇವನೆ ಅರಿವು, ಮಾದಕ ವ್ಯಸನ ತಡೆಗೆ ನಾಟಕ ಪ್ರದರ್ಶನ, ಮಾ. 4ರಂದು ರಸ್ತೆ ಸುರಕ್ಷತೆ ಜಾಗೃತಿ ರ್ಯಾಲಿ, ಮಾ. 5ರಂದು ಮಾದಕ ವ್ಯಸನ ದುಷ್ಪರಿಣಾಮ ಅರಿವು, ಸೈಬರ್ ಭದ್ರತೆ, ಮಾ. 6ರಂದು ರಸ್ತೆ ಸುರಕ್ಷತೆ ಜಾಗೃತಿ, ಮಾದಕವಸ್ತು ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳು ತಯಾರಿಸಿದ ಕಿರುಚಿತ್ರ ಬಿಡುಗಡೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.