ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಪ್ರಯಾಣಿಕರನ್ನು ಮರೆತು ಆಗಸಕ್ಕೆ ಹಾರಿದ ಗೋ ಫಸ್ಟ್‌ ವಿಮಾನ: ಆಕ್ರೋಶ

Last Updated 10 ಜನವರಿ 2023, 16:14 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ದೆಹಲಿಗೆ ಹೊರಟ್ಟಿದ್ದ ಗೋ ಫಸ್ಟ್ ವಿಮಾನ 55 ಪ್ರಯಾಣಿಕರನ್ನು ಬಿಟ್ಟು ಹಾರಿದೆ.

ವೇಳಾಪಟ್ಟಿಯಂತೆ ಗೋ ಫಸ್ಟ್‌ ಸಂಸ್ಥೆಯ ಜಿ8-116 ವಿಮಾನ ಬೆಳಿಗ್ಗೆ 6.20ಕ್ಕೆ ಬೆಂಗಳೂರಿನಿಂದ ದೆಹಲಿಗೆ ಹೊರಡುವುದಿತ್ತು. ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ಬೆಳಿಗ್ಗೆ 5.30ಕ್ಕೂ ಮುನ್ನವೇ ನಿಲ್ದಾಣ ತಲುಪಿದ್ದರು. ಅಗತ್ಯ ಪರಿಶೀಲನೆ ಪ್ರಕ್ರಿಯೆ ಮುಗಿಸಿದ ಪ್ರಯಾಣಿಕರು ಎರಡು ಶೆಟಲ್ ಬಸ್‌ನಲ್ಲಿ ಟರ್ಮಿನಲ್‌ನಿಂದ ವಿಮಾನ ನಿಂತಿದ್ದ ಜಾಗಕ್ಕೆ ತೆರಳಿದ್ದರು.

ಈ ಪೈಕಿ ಒಂದು ಬಸ್‌ನಲ್ಲಿದ್ದ ಪ್ರಯಾಣಿಕರು ವಿಮಾನ ಏರಿದರು. ಮತ್ತೊಂದು ಬಸ್‌ನಲ್ಲಿದ್ದ 55 ಪ್ರಯಾಣಿಕರು ವಿಮಾನ ಏರುವ ಮೊದಲೇ ವಿಮಾನ ಆಗಸಕ್ಕೆ ಹಾರಿದೆ.

ವಿಮಾನ ತಪ್ಪಿಸಿಕೊಂಡ ಪ್ರಯಾಣಿಕರು ವಿಮಾನ ನಿಯಂತ್ರಣ ಪ್ರಾಧಿಕಾರ, ವಿಮಾನ ನಿಲ್ದಾಣದ ಆಡಳಿತಾಧಿಕಾರಿಗಳು, ಕೇಂದ್ರ
ನಾಗರಿಕ ವಿಮಾನಯಾನ ಸಚಿವಾಲಯವನ್ನು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

ಇಬ್ಬರು ಸಿಬ್ಬಂದಿ ಅಮಾನತು, ಟಿಕೆಟ್‌ ಹಣ ವಾಪಸ್‌: ಸಂಸ್ಥೆಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತನ್ನ ಸಂಸ್ಥೆಯ ಸಂವಹನ ವಿಭಾಗದ ಇಬ್ಬರು ಸಿಬ್ಬಂದಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಿದೆ.

ಕೆಲವು ಪ್ರಯಾಣಿಕರನ್ನು ಬೇರೆ ವಿಮಾನದಲ್ಲಿ ದೆಹಲಿಗೆ ಕಳಿಸಲಾಗಿದೆ. ಇತರರಿಗೆ ಟಿಕೆಟ್‌ ಹಣ ಮರುಪಾವತಿ ಮಾಡಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಇಬ್ಬರು ಸಿಬ್ಬಂದಿ ಅಮಾನತು: ಟಿಕೆಟ್‌ ಹಣ ವಾಪಸ್‌
ಘಟನೆ ಬಗ್ಗೆ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗೋ ಫಸ್ಟ್‌ ವಿಮಾನಯಾನ ಸಂಸ್ಥೆಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತನ್ನ ಸಂಸ್ಥೆಯ ಸಂವಹನ ವಿಭಾಗದ ಇಬ್ಬರು ಸಿಬ್ಬಂದಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಿದೆ.

ಕೆಲವು ಪ್ರಯಾಣಿಕರನ್ನು ಬೇರೆ ವಿಮಾನದಲ್ಲಿ ದೆಹಲಿಗೆ ಕಳಿಸಲಾಗಿದೆ. ಇತರರಿಗೆ ಟಿಕೆಟ್‌ ಹಣ ಮರುಪಾವತಿ ಮಾಡಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

‘ಗೋ ಫಸ್ಟ್‌’ಗೆ ಡಿಜಿಸಿಎ ನೋಟಿಸ್‌
ಮುಂಬೈ (ಪಿಟಿಐ):
ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಮಂಗಳವಾರ ನೋಟಿಸ್‌ ನೀಡಿದೆ. ಹಲವು ಲೋಪಗಳು ಕಂಡು ಬಂದಿರುವ ಕಾರಣ ನೋಟಿಸ್‌ ನೀಡಿರುವುದಾಗಿ ಅದು ಹೇಳಿದೆ.

ಕ್ಷಮೆಯಾಚನೆ: ಸಿಬ್ಬಂದಿಯಿಂದ ಆದ ಆಚಾತುರ್ಯಕ್ಕಾಗಿ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆ ಕೋರಿದೆ. ಲೋಪದಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಯನ್ನು ಕರ್ತವ್ಯದಿಂದ ದೂರವಿಡಲಾಗಿದ್ದು, ಎಲ್ಲರ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

‘ಬಾಧಿತ ಪ್ರಯಾಣಿಕರಿಗೆ ಮುಂದಿನ 12 ತಿಂಗಳಲ್ಲಿ ದೇಶದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡಲು ನಿರ್ಧರಿಸಿರುವುದಾಗಿ’ ಎಂದು ಗೋ ಫಸ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT