ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುದದ್ವಾರದಲ್ಲಿ ₹36.97 ಲಕ್ಷ ಮೌಲ್ಯದ ಚಿನ್ನ

Last Updated 1 ಅಕ್ಟೋಬರ್ 2022, 20:26 IST
ಅಕ್ಷರ ಗಾತ್ರ

ಬೆಂಗಳೂರು: ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಮೂವರು ಪ್ರಯಾಣಿಕರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

‘ದುಬೈನಿಂದ ಇಕೆ– 568 ವಿಮಾನ ದಲ್ಲಿ ಸೆ. 30ರಂದು ಬೆಂಗಳೂರಿನ ನಿಲ್ದಾಣಕ್ಕೆ ಬಂದಿಳಿದಿದ್ದ ಮೂವರು ಪ್ರಯಾಣಿಕರ ಬಳಿ ₹ 36.97 ಲಕ್ಷ ಮೌಲ್ಯದ 729 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ವಿಮಾನದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮೂವರು ಪ್ರಯಾಣಿಕ
ರನ್ನು ತಪಾಸಣೆ ನಡೆಸಿದಾಗ ಯಾವುದೇ ಚಿನ್ನ ಪತ್ತೆಯಾಗಿರಲಿಲ್ಲ. ಆದರೆ, ಅವರ ನಡೆಯಿಂದ ಅನುಮಾನ ಹೆಚ್ಚಾಗಿತ್ತು.’

‘ಮೂವರನ್ನೂ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಪುನಃ ತಪಾಸಣೆಗೆ ಒಳಪಡಿಸಲಾಯಿತು. ಅವರ ಗುದದ್ವಾರ ದಲ್ಲಿ ಚಿನ್ನ ಬಚ್ಚಿಟ್ಟುಕೊಂಡಿದ್ದು ಗೊತ್ತಾಯಿತು. ವೈದ್ಯರ ಸಹಾಯದಿಂದ ಚಿನ್ನವನ್ನು ಹೊರಗೆ ತೆಗೆಸಲಾಯತು. ಕಪ್ಪು ಬಣ್ಣದ ಸಣ್ಣ ರಬ್ಬರ್ ಚೀಲದೊಳಗೆ ಚಿನ್ನ ಇರಿಸಲಾಗಿತ್ತು. ಅದೇ ಚೀಲವನ್ನು ಆರೋಪಿಗಳು ಗುದದ್ವಾರದಲ್ಲಿ ಇರಿಸಿ ಕೊಂಡಿದ್ದರು’ ಎಂದು ತಿಳಿಸಿವೆ.

₹ 22.16 ಲಕ್ಷ ಮೌಲ್ಯದ ಇ–ಸಿಗರೇಟ್: ‘ಮೂವರು ಇ–ಸಿಗರೇಟ್ ಸಹ ಸಾಗಿಸುತ್ತಿದ್ದರು. ಅವರ ಬ್ಯಾಗ್‌ನಲ್ಲಿದ್ದ
₹22.16 ಲಕ್ಷ ಮೌಲ್ಯದ ಇ–ಸಿಗರೇಟ್ ಜಪ್ತಿ ಮಾಡಲಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT