ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಸಿಗ್ನಲ್‌ಲೈಟ್‌ ವ್ಯವಸ್ಥೆ: ಪ್ರಾಯೋಗಿಕ ಯೋಜನೆ ಯಶಸ್ವಿ

ಈ ಕ್ರಮದಿಂದ ವಾಹನ ದಟ್ಟಣೆ ಅಧ್ಯಯನ, ಸಮಯ ಕಡಿತ
Last Updated 27 ಜುಲೈ 2022, 19:52 IST
ಅಕ್ಷರ ಗಾತ್ರ

ಬೆಂಗಳೂರು: ಗೂಗಲ್‌ ಕಂಪನಿಯು ನಗರದ ಸಂಚಾರ ಪೊಲೀಸರ ಸಹಕಾರದಲ್ಲಿ ಕತ್ರಿಗುಪ್ಪೆ ವೃತ್ತದಲ್ಲಿ ವಾಹನ ದಟ್ಟಣೆ ಅಧ್ಯಯನ ಮಾಡಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಿಗ್ನಲ್‌ಲೈಟ್‌ನಲ್ಲಿ ಹಸಿರು, ಕೆಂಪು ದೀಪಗಳು ಹೊತ್ತುವ ಸಮಯ ನಿಗದಿಪಡಿಸಲು ಕತ್ರಿಗುಪ್ಪೆ ವೃತ್ತದಲ್ಲಿ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ಅದು ಯಶಸ್ವಿಯಾಗಿದ್ದು, ಇತರೆ ವೃತ್ತಗಳಲ್ಲೂ ಈ ಯೋಜನೆ ಜಾರಿಗೊಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ.

ಈ ವೃತ್ತದಲ್ಲಿ ವಾಹನ ದಟ್ಟಣೆಯ ಸ್ಥಿತಿಯನ್ನು ಗೂಗಲ್‌ ಸಂಸ್ಥೆಯು ಉಪಗ್ರಹದ ಮೂಲಕ ಅಧ್ಯಯನ ನಡೆಸಿ, ಸಿಗ್ನಲ್‌ಲೈಟ್‌ ಸಮಯವನ್ನು ಮರು ನಿಗದಿಪಡಿಸಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ.

ಚಾಲಕರಿಗೆ ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗುತ್ತಿದೆ.ವಿಶ್ವದಲ್ಲಿ ನಾಲ್ಕು ಪ್ರಮುಖ ನಗರಗಳು ಈ ಪ್ರಾಯೋಗಿಕ ಯೋಜನೆಗೆ ಆಯ್ಕೆಯಾಗಿದ್ದವು. ಬೆಂಗಳೂರು ಕೂಡ ಆಯ್ಕೆಯಾಗಿತ್ತು. ನಾಲ್ಕು ತಿಂಗಳ ಹಿಂದೆ ಗೂಗಲ್‌, ಕತ್ರಿಗುಪ್ಪೆ ವೃತ್ತದ ವಾಹನ ದಟ್ಟಣೆ ಅಂಕಿಅಂಶ ಅಧ್ಯಯನ ಆರಂಭಿಸಿತ್ತು. ಆಯಾ ವೃತ್ತಗಳ ವಾಹನ ದಟ್ಟಣೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಸಮಯ ನಿಗದಿ ಮಾಡುವುದರಿಂದ ಪರಿಹಾರ ಸಿಗಲಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ನಗರದಲ್ಲಿ 14 ಸಾವಿರ ಕಿ.ಮೀ ಪ್ರಮುಖ ರಸ್ತೆ, 44 ಸಾವಿರ ಜಂಕ್ಷನ್‌ ಗಳು, ಒಂದು ಸಾವಿರ ಪ್ರಮುಖ ವೃತ್ತ, 398 ವೃತ್ತದಲ್ಲಿ ಸಿಗ್ನಲ್‌ಲೈಟ್‌ಗಳಲ್ಲಿ ಪೊಲೀಸರು ಟ್ರಾಫಿಕ್‌ ನಿಯಂತ್ರಿಸಬೇಕಿದೆ. ಸಂಚಾರ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ತಂತ್ರಜ್ಞಾನ ಅವಳಡಿಕೆ
ಮಾಡಿಕೊಳ್ಳುತ್ತಲೇ ಇದೆ. ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT