ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಟಿಎಸ್ ನಿಧಾನ: ಶಿಕ್ಷಕರಿಗೆ ಕಾಯುವ ಕಷ್ಟ

Last Updated 24 ಸೆಪ್ಟೆಂಬರ್ 2020, 22:03 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ವಿವರವನ್ನು ದಾಖಲಿಸುವ ಎಸ್‌ಎಟಿಎಸ್‌ (ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್ ಸಿಸ್ಟಂ) ತಂತ್ರಾಂಶ ತುಂಬಾ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರು ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳಬೇಕಾದ ಕಷ್ಟ ಎದುರಿಸುತ್ತಿದ್ದಾರೆ.

‘ಸರ್ಕಾರದ ಯಾವುದೇ ಸೌಲಭ್ಯ ವಿದ್ಯಾರ್ಥಿಗೆ ದೊರೆಯಬೇಕೆಂದರೆ ಎಸ್‌ಎಟಿಎಸ್‌ ಅಡಿ ಆ ವಿದ್ಯಾರ್ಥಿಯ ಮಾಹಿತಿ ದಾಖಲಿಸಬೇಕಾಗುತ್ತದೆ. ಆದರೆ, ದಿನವಿಡೀ ಕುಳಿತರೂ ಮೂರ ರಿಂದ ನಾಲ್ಕು ವಿದ್ಯಾರ್ಥಿಗಳ ಅರ್ಜಿ ಅಪ್‌ಲೋಡ್‌ ಮಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿ ಸಲು ಬಯಸದ ಶಿಕ್ಷಕರೊಬ್ಬರು ಹೇಳಿದರು.

‘ವೆಬ್‌ಸೈಟ್‌ಗೆ ಲಾಗಿನ್‌ ಆಗುವುದೂ ಕಷ್ಟವಾಗುತ್ತದೆ. ನಿರ್ದಿಷ್ಟ ಗಡುವಿನೊಳಗೆ ಎಲ್ಲ ವಿದ್ಯಾರ್ಥಿಗಳ ಮಾಹಿತಿ ದಾಖಲಿಸಬೇಕು ಎಂದು ಹೇಳುತ್ತಾರೆ. ಮಧ್ಯರಾತ್ರಿಯವರೆಗೆ ಅರ್ಜಿ ಅಪ್‌ಲೋಡ್‌ ಮಾಡುವ ಕೆಲಸ ಮಾಡಬೇಕು. ಮಧ್ಯರಾತ್ರಿಯೂ ವೆಬ್‌ಸೈಟ್‌ ನಿಧಾನವಾಗಿಯೇ ಇರುತ್ತದೆ’ ಎಂದು ಅಳಲು ತೋಡಿಕೊಂಡರು.

‘ಆಯಾ ದಿನವೇ ಎಲ್ಲ ವಿದ್ಯಾರ್ಥಿಗಳ ಅರ್ಜಿ ಅಪ್‌ಲೋಡ್‌ ಮಾಡಲೇಬೇಕು ಎಂದು ಮುಖ್ಯಶಿಕ್ಷಕರು ಹೇಳುತ್ತಾರೆ. ಸಮಸ್ಯೆ ಹೇಳಿಕೊಂಡರೆ, ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ’ ಎಂದರು.

‘ವೆಬ್‌ಸೈಟ್‌ ಮತ್ತು ತಂತ್ರಾಂಶ ನಿರ್ವಹಣೆಯ ಕೆಲಸ ನಡೆಯುತ್ತಿದ್ದುದರಿಂದ ಎರಡು ದಿನ ನಿಧಾನಗತಿಯಲ್ಲಿ ತಂತ್ರಾಂಶ ಕಾರ್ಯನಿರ್ವಹಿಸುತ್ತಿತ್ತು. ಈಗ ಸರಿ ಮಾಡಲಾಗಿದೆ. ಮತ್ತೆ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT